ಕರ್ನಾಟಕ

karnataka

ETV Bharat / bharat

ಮಿಲಿಟರಿ ಸರ್ಕಾರದ ವಿರುದ್ಧ ಹೋರಾಟ: ಮ್ಯಾನ್ಮಾರ್​​​ ಯುವತಿ ತಲೆಗೆ ಗುಂಡು

ಲೈವ್​ ಬುಲುಟ್​​ಗಳನ್ನು ಬಳಸುತ್ತಿಲ್ಲ ಎಂದು ಮಿಲಿಟರಿ ಹೇಳಿದರೂ ಕೂಡಾ ಬಾಲಕಿಯ ಶವಪರೀಕ್ಷೆಯಲ್ಲಿ ನೈಜ ಬುಲೆಟ್​​​ ಪತ್ತೆಯಾಗಿದೆ. ಇದರಿಂದ ಶಾಂತಿಯುವ ಪ್ರತಿಭಟನಾಕರರ ಮೇಲೆ ನೈಜ ಗುಂಡು ಹಾರಿಸಿದಂತೆ ತೋರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

myanmar-teenager-who-was-shot-during-anti-coup-protests-succumbs-to-injuries
ನಾಯ್ಪಿಟಾವ್ ಮಿಲಿಟರಿ ದಂಗೆ

By

Published : Feb 13, 2021, 6:05 PM IST

ನಾಯ್ಪಿಟಾವ್(ಮ್ಯಾನ್ಮಾರ್​): ಮಿಲಿಟರಿ ದಂಗೆಯ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸರು ಮ್ಯಾನ್ಮಾರ್​​ ಬಾಲಕಿಯೊಬ್ಬಳ ತೆಲೆಗೆ ಗುಂಡಿಟ್ಟು ಕೊಂದ ಘಟನೆ ನಡೆದಿದೆ.

ಮಾ ಮಿಯಾ ತ್ವೆ ತ್ವೆ ಖೈಂಗ್ ಮೃತ ಯುವತಿ ಎಂದು ತಿಳಿದು ಬಂದಿದೆ. ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ವೆಂಟಿಲೇಟರ್‌ ಅಳವಡಿಕೆ ಉಪಯೋಗವಿಲ್ಲ ಎಂದು ವೈದ್ಯರು ಕುಟುಂಬಕ್ಕೆ ಸಲಹೆ ನೀಡಿದ್ದಾರೆ.

ಲೈವ್​ ಬುಲುಟ್​​ಗಳನ್ನು ಬಳಸುತ್ತಿಲ್ಲ ಎಂದು ಮಿಲಿಟರಿ ಹೇಳಿದರೂ ಕೂಡಾ ಬಾಲಕಿಯ ಶವಪರೀಕ್ಷೆಯಲ್ಲಿ ನೈಜ ಬುಲೆಟ್​​​ ಪತ್ತೆಯಾಗಿದೆ. ಇದರಿಂದ ಶಾಂತಿಯುವ ಪ್ರತಿಭಟನಾಕರರ ಮೇಲೆ ನೈಜ ಗುಂಡು ಹಾರಿಸಿದಂತೆ ತೋರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಿಲಿಟರಿ ವಿರುದ್ಧದ ಹೋರಾಟಕ್ಕೆ ಮೊದಲ ಬಲಿಯಾಗಿದೆ. ಸಾವಿರಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಬಂಧಿಸಲಾಗಿದೆ.

ಘಟನೆ ವಿವರ

ಫೆಬ್ರವರಿ 1 ರಂದು, ಮ್ಯಾನ್ಮಾರ್‌ನ ಮಿಲಿಟರಿ ದಂಗೆ ನಡೆಸಿ, ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಯ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸಿತ್ತು. ಅಲ್ಲದೇ ನವೆಂಬರ್ 2020 ರ ಚುನಾವಣೆಯಲ್ಲಿ ಮತದಾರರ ವಂಚನೆ ಆರೋಪಿಸಿ ಎನ್‌ಎಲ್‌ಡಿ ಜಯ ಸಾಧಿಸಿದೆ.

ಮಿಲಿಟರಿ ರಾಜ್ಯ ರಾಜಕೀಯ ಸಲಹೆಗಾರ ಆಂಗ್ ಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಸೇರಿದಂತೆ ಹಲವಾರು ರಾಜಕೀಯ ಅಧಿಕಾರಿಗಳನ್ನು ಮತ್ತು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಒಂದು ವರ್ಷದ ತುರ್ತು ಪರಿಸ್ಥಿತಿ ಘೋಷಿಸಿತು. ಸದ್ಯ ಮಿಲಿಟರಿ ದಬ್ಬಾಳಿಕೆಯ ವಿರುದ್ಧ ಯಾಂಗೊನ್ ಮತ್ತು ಇತರ ಪ್ರಮುಖ ನಗರಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಮುಂದುವರೆದಿದೆ.

ABOUT THE AUTHOR

...view details