ನಾಗ್ಪುರ(ಮಹಾರಾಷ್ಟ್ರ) : ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಂಗ್ರೆಸ್ಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ಸ್ನೇಹಿತ ಒಮ್ಮೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದರು, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಕ್ಕಿಂತ ಬಾವಿಯಲ್ಲಿ ಮುಳುಗುತ್ತೇನೆ ಎಂದು ಹೇಳಿದ್ದೆ. ಕಾಂಗ್ರೆಸ್ಸಿನ ಸಿದ್ಧಾಂತ ನನಗೆ ಇಷ್ಟವಿಲ್ಲ ಎಂದು ಹೇಳಿದರು.
ನನ್ನ ಸ್ನೇಹಿತ ಒಮ್ಮೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದರು.. ನಿತಿನ್ ಗಡ್ಕರಿ ಕೊಟ್ಟ ಉತ್ತರ ಹೇಗಿತ್ತು ಎಂದರೆ.. - ಈಟಿವಿ ಭಾರತ್ ಕನ್ನಡ
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಂಗ್ರೆಸ್ ಬಗ್ಗೆ ಹೇಳಿಕೆ ನೀಡಿದ್ದಾರೆ. ನನ್ನ ಸ್ನೇಹಿತ ಒಮ್ಮೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದರು ಎಂದಿದ್ದಾರೆ.
![ನನ್ನ ಸ್ನೇಹಿತ ಒಮ್ಮೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದರು.. ನಿತಿನ್ ಗಡ್ಕರಿ ಕೊಟ್ಟ ಉತ್ತರ ಹೇಗಿತ್ತು ಎಂದರೆ.. Nitin Gadkari](https://etvbharatimages.akamaized.net/etvbharat/prod-images/768-512-16225551-thumbnail-3x2-bng.jpeg)
ನಿತಿನ್ ಗಡ್ಕರಿ ಆಗಾಗ ತಮಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡುತ್ತಾರೆ. ಅವರ ನೇರ ಮಾತುಗಳು ಒಮ್ಮೊಮ್ಮೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೂ ಉಂಟು. ನಾಗ್ಪುರದ ಡಾ.ಹೆಡಗೇವಾರ್ ಸ್ಮೃತಿ ಭವನ ಆವರಣದಲ್ಲಿ ಶಿಕ್ಷಕರು ಮತ್ತು ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಗಡ್ಕರಿ ಅವರು, ದಿ. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ದಿ. ದೀನದಯಾಳ್ ಉಪಾಧ್ಯಾಯ ಹಾಗೂ ಅನೇಕ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ದೇಶ ಹಾಗೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ :ಸಿಡಬ್ಲ್ಯೂಸಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರ ಚುನಾವಣೆ.. ಮತದಾರರ ಪಟ್ಟಿ ಬಗ್ಗೆ ಆನಂದ್ ಶರ್ಮಾ ಆಕ್ಷೇಪ