ಮಲಪ್ಪುರಂ: 5 ವರ್ಷದ ಮಗನಿಗೆ ಮುಖ್ಯ ರಸ್ತೆಯಲ್ಲಿ ಬೈಕ್ ನಿಯಂತ್ರಿಸಲು ಕೊಟ್ಟ ಹಿನ್ನೆಲೆ ತಂದೆಯ ಪರವಾನಿಗೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ರದ್ದುಪಡಿಸಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ತೆಲಕ್ಕಾಡ್ ಮೂಲದ ಅಬ್ದುಲ್ ಮಜೀದ್ ಎಂಬುವರು ತನ್ನ ಪುಟ್ಟ ಮಗನೊಂದಿಗೆ ಮನ್ನಾರ್ಕಡ್ನ ಪೆರಿಂಟಲ್ಮಣ್ಣ ಹೆದ್ದಾರಿಯಲ್ಲಿ ಮೋಟಾರ್ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಅಬ್ದುಲ್ ತನ್ನ 5 ವರ್ಷದ ಮಗನಿಗೆ ಬೈಕ್ ಹ್ಯಾಂಡಲ್ ಹಿಡಿದು ಅದನ್ನು ನಿಯಂತ್ರಿಸಲು ತರಬೇತಿ ನೀಡುತ್ತಾ, ಬೈಕ್ ರೈಡ್ ಮಾಡುತ್ತಿದ್ದ.