ಕರ್ನಾಟಕ

karnataka

ETV Bharat / bharat

ವಾರಣಾಸಿ ತಲುಪಿದ ವಿದೇಶಿ ಪ್ರವಾಸಿಗರಿದ್ದ ಐಷಾರಾಮಿ ಎಂ.ವಿ.ರಾಜ್​ಮಹಲ್​ ಕ್ರೂಸ್ - ಕೊಲ್ಕತ್ತಾದಿಂದ ಹೊರಟ ವಿದೇಶಿ ಪ್ರವಾಸಿಗರ

ಕೋಲ್ಕತ್ತಾದಿಂದ ಆಗಮಿಸಿರುವ ಎಂ.ವಿ.ರಾಜಮಹಲ್‌ ಕ್ರೂಸ್ ವಾರಣಾಸಿಯಲ್ಲಿ ಐದು ದಿನ ತಂಗಲಿದೆ.

mv-rajmahal-cruise-reached-varanmv-rajmahal-cruise-reached-varanasi-with-17-foreign-tourists-from-kolkataasi-with-17-foreign-tourists-from-kolkata
mv-rajmahal-cruise-reached-varanasi-with-17-foreign-tourists-from-kolkata

By ETV Bharat Karnataka Team

Published : Aug 22, 2023, 5:29 PM IST

ವಾರಣಾಸಿ: 17 ಜನ ವಿದೇಶಿ ಪ್ರವಾಸಿಗರನ್ನು ಹೊತ್ತ ವಿಲಾಸಿ ಎ.ವಿ.ರಾಜ್​ಮಹಲ್​ ಕ್ರೂಸ್​​ ಮಂಗಳವಾರ ರಾತ್ರಿ ಕಾಶಿ ತಲುಪಲಿದೆ. ಕೋಲ್ಕತ್ತಾದಿಂದ ಹೊರಟ ಕ್ರೂಸ್​​ ಸೋಮವಾರ ರಾತ್ರಿಯಿಡೀ ಗಾಜಿಪುರದಲ್ಲಿ ತಂಗಿತ್ತು. ವಾರಣಾಸಿಗೆ ಬಂದ ಬಳಿಕ ಪ್ರವಾಸಿಗರು ಕಾಶಿಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಐದು ದಿನ ಪ್ರವಾಸ ಮಾಡಲಿದ್ದಾರೆ.

ವಾರಣಾಸಿಯಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಗಸ್ಟ್​ 25, 26 ಮತ್ತು 27 ರಂದು ಮೂರು ದಿನಗಳ ಕಾಲ ಈ ಕಾರ್ಯಕ್ರಮಗಳು ನಡೆಯಲಿವೆ. ವಾರಣಾಸಿಯ ಅನೇಕ ಪ್ರವಾಸಿ ತಾಣಗಳಿಗೂ ಭೇಟಿ ನೀಡಲಿದ್ದು, ಆಗಸ್ಟ್​​ 29ರಂದು ಕ್ರೂಸ್​ ಮರಳಲಿದೆ.

ಎಂವಿ ರಾಜ್​ಮಹಲ್​ ಕ್ರೂಸ್​

ವಾಟರ್​ವೇಸ್​​ ಅಥಾರಿಟಿ ಆಫ್​ ಇಂಡಿಯಾ ಈ ಕ್ರೂಸ್​ ನಿರ್ವಹಣೆ ಮಾಡುತ್ತಿದೆ. ವಿದೇಶಿ ಪ್ರಜೆಗಳು ಭಾರತದ ಜಲಮೂಲಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕ್ರೂಸ್​ ವ್ಯವಸ್ಥೆ ಮಾಡಲಾಗಿದೆ. ಎಂ.ವಿ.ರಾಜ್​ಮಹಲ್​ ಕ್ರೂಸ್​ ಕೋಲ್ಕತ್ತಾದಿಂದ ವಾರಣಾಸಿಗೆ ಪ್ರಯಾಣ ನಡೆಸಲಿದೆ. ಬಿಹಾರ ಮತ್ತು ಗಾಜಿಪುರ್​ ಮಾರ್ಗವಾಗಿ ಸಂಚರಿಸಲಿದೆ.

14 ದಿನಗಳ ಬಳಿಕ ವಾರಣಾಸಿಗೆ: ಕೋಲ್ಕತ್ತಾದಿಂದ ಆಗಸ್ಟ್​ 6ರಂದು ಆರಂಭವಾದ ಕ್ರೋಸ್​​ ಪಾಟ್ನಾ ಮತ್ತು ಫರಕ್ಕಾ ಮೂಲಕ 14 ದಿನದ ನಂತರ ವಾರಣಾಸಿ ತಲುಪಿದೆ ಎಂದು ಬಿಹಾರ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅಜಿತ್​​ ಕುಮಾರ್​ ಮಾಹಿತಿ ನೀಡಿದರು. ಒಟ್ಟು 17 ಮಂದಿ ಪ್ರವಾಸಿಗರಿದ್ದಾರೆ. ಎರಡು ಶಿಫ್ಟ್​ ಕ್ರೂಸ್​ನಲ್ಲಿ ದೆಹಲಿಯಿಂದ ಕೂಡ ಪ್ರವಾಸಿಗರು ಬರಲಿದ್ದಾರೆ. ವಾರಣಾಸಿ ತಲುಪಿದ ಬಳಿಕ ಪ್ರವಾಸಿಗರು ಇಲ್ಲಿನ ಸ್ಥಳೀಯ ಕ್ಷೇತ್ರಗಳಿಗೆ ಪ್ರವಾಸ ನೀಡಲಿದ್ದಾರೆ ಎಂದರು.

ಎಂವಿ ರಾಜ್​ಮಹಲ್​ ಕ್ರೂಸ್​

ಆಗಸ್ಟ್​​ 25, 26 ಮತ್ತು 27 ರಂದು ಮೂರು ದಿನ ವಿವಿಧ ವರ್ಣರಂಜಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್​ 25ರಂದು ಕ್ರೂಸ್​ನಲ್ಲೇ ಕಾರ್ಯಕ್ರಮ ಇರಲಿದ್ದು, ಆಗಸ್ಟ್​ 26ರಂದು ಚುನಾರ್​ ಕೋಟೆಗೆ ಪ್ರವಾಸಿಗರು ಭೇಟಿ ನೀಡುವರು. ಇದೇ ವೇಳೆ ಮಿರ್ಜಾಪುರ್​​ಗೂ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಆಗಸ್ಟ್​ 27ರಂದು ಸಾರಾನಾಥದ ವಸ್ತು ಸಂಗ್ರಹಾಲಯ, ಬುದ್ಧ ಪ್ರವಚನ ನೀಡಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಐದು ದಿನಗಳ ಬಳಿಕ ಅಂದರೆ ಆಗಸ್ಟ್​ 29ರಂದು ಕೋಲ್ಕತ್ತಾಕ್ಕೆ ಕ್ರೂಸ್​ ಮರಳಲಿದೆ.

ಎಂವಿ ರಾಜ್​ಮಹಲ್​ ಕ್ರೂಸ್​

ಕ್ರೂಸ್​ನ ವಿಶೇಷತೆ: ರಾಜ್​ಮಹಲ್​ ಕ್ರೂಸ್​ನಲ್ಲಿ 22 ದೊಡ್ಡ ಎಸಿ ರೂಂಗಳಿದ್ದು, 40 ಜನರು ತಂಗಬಹುದು. ಇದರ ಹೊರತಾಗಿ ಡೈನಿಂಗ್​ ಹಾಲ್​, ಸ್ಟಾಫ್​ ರೂಂ, ರೆಸ್ಟೋ ಬಾರ್​, ಸಲೂನ್​ ಮತ್ತು ಸ್ಪಾ ಕೂಡ ಇರಲಿದೆ. ಮೂರು ಹಂತದ ಕ್ರೂಡನ ಮುಖ್ಯ ಡೆಕ್​ ಹೌಸ್​ನಲ್ಲಿ ಗ್ಯಾಲರಿ, ಡೈನಿಂಗ್​ ಹಾಲ್​ ಮತ್ತು ಸ್ಪಾ, ಕಚೇರಿಗಳಿವೆ. ಕ್ರೂಸ್​ನಲ್ಲಿ ಇಂಟರ್​ ಕಮ್ಯೂನಿಕೇಷನ್​ ಟೆಲಿಫೋನ್​ ಹೊಂದಿದ್ದು, ಪ್ರತಿ ಕ್ಯಾಬಿನ್​ನಲ್​ಲಿ ಮಿನಿ ಬಾರ್​ ಇದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ರೂಂಗಳಿವೆ. ಈ ಕ್ರೂಸ್​ನಲ್ಲಿ 13 ಬ್ರಿಟಿಷರು, 3 ಜರ್ಮನ್​ ಮತ್ತು 2 ಭಾರತೀಯ ಪ್ರವಾಸಿಗರಿದ್ದಾರೆ.

ಇದನ್ನೂ ಓದಿ: Sunny Deol: 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ.. ನಟ, ಸಂಸದ ಸನ್ನಿ ಡಿಯೋಲ್​ ಘೋಷಣೆ

ABOUT THE AUTHOR

...view details