ಕರ್ನಾಟಕ

karnataka

ETV Bharat / bharat

ಪಾಕಿಸ್ತಾನಕ್ಕೆ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಅಷ್ಟೊಂದು ಗೌರವ ಸಿಗುತ್ತಿಲ್ಲ: ಭಾಗವತ್ - ಸನಾತನ ಧರ್ಮ

ಪಾಕಿಸ್ತಾನಕ್ಕೆ ಇಲ್ಲಿಂದ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಹೆಚ್ಚು ಗೌರವ, ಸ್ಥಾನಮಾನಗಳು ಸಿಗುತ್ತಿಲ್ಲ. ಹಿಂದೂ ಮತ್ತು ಮುಸಲ್ಮಾನರು ಒಂದೇ ಪೂರ್ವಜನರನ್ನು ಹೊಂದಿದ್ದು, ಈ ಆಲೋಚನೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಇದ್ದಿದ್ದರೆ ದೇಶ ಇಬ್ಭಾಗವಾಗುವುದನ್ನು ತಡೆಯಬಹುದಾಗಿತ್ತು ಎಂದು ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋಹನ್ ಭಾಗವತ್
ಮೋಹನ್ ಭಾಗವತ್

By

Published : Oct 13, 2021, 10:58 AM IST

Updated : Oct 13, 2021, 11:19 AM IST

ನವದೆಹಲಿ: ಹಿಂದೂ ಮತ್ತು ಮುಸಲ್ಮಾನರು ಒಂದೇ ಪೂರ್ವಜನರನ್ನು ಹೊಂದಿದ್ದು, ಈ ಆಲೋಚನೆ ಭಾರತ ಸ್ವಾತಂತ್ರ್ಯ ಸಂಗ್ರಾಮ ವೇಳೆ ಇದ್ದಿದ್ದರೆ ಭಾರತ ಇಬ್ಭಾಗವಾಗುವುದನ್ನು ತಡೆಯಬಹುದಾಗಿತ್ತು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಹಿಂದುತ್ವ ಪ್ರತಿಪಾದಕ ವಿ.ಡಿ.ಸಾವರ್ಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಇಲ್ಲಿಂದ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಹೆಚ್ಚು ಗೌರವ, ಸ್ಥಾನಮಾನಗಳು ಸಿಗುತ್ತಿಲ್ಲ. ಇಲ್ಲಿಯೇ ಉಳಿದುಕೊಂಡವರು ತಮ್ಮ ಧಾರ್ಮಿಕ ಆರಾಧನಾ ವಿಧಾನವನ್ನು ಲೆಕ್ಕಿಸದೆ ಭಾರತಕ್ಕೆ ಸೇರಿದವರಾಗಿದ್ದಾರೆ. ಅಷ್ಟಕ್ಕೂ ನಮಗೆಲ್ಲಾ ಬೇಕಿರುವುದು ಸಾಮರಸ್ಯದ ಸಮಾಜ ಎಂದರು.

ಭಾರತದ ಹಿಂದುತ್ವ ಮತ್ತು ಸನಾತನ ಧರ್ಮದ ಹಳೆಯ ಸಂಸ್ಕೃತಿಯು ಉದಾರವಾಗಿದೆ. ನಾವು ಈ ಸಂಸ್ಕೃತಿಯನ್ನು ಆನುವಂಶಿಕವಾಗಿ ಪಡೆದುಕೊಂಡಿದ್ದೇವೆ. ಆರಾಧನಾ ವಿಧಾನದಿಂದ ಯಾರನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ (ಹಿಂದೂಗಳು ಮತ್ತು ಮುಸ್ಲಿಮರು) ಪೂರ್ವಜರು ಒಬ್ಬರೇ. ಈ ಚಿಂತನೆ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿದ್ದಿದ್ದರೆ ಭಾರತ ವಿಭಜನೆಯನ್ನು ತಡೆಯಬಹುದಿತ್ತು ಎಂದು ಹೇಳಿದರು.

ಇನ್ನು ಸಾವರ್ಕರ್ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಸಾವರ್ಕರ್ ರಾಷ್ಟ್ರೀಯವಾದಿ ಮತ್ತು ದೂರದೃಷ್ಟಿ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ಹಿಂದುತ್ವ ಅಖಂಡ ಭಾರತದ ಕುರಿತಾಗಿತ್ತು. ಜಾತಿ, ಧರ್ಮ, ಸ್ಥಾನಮಾನಗಳ ಆಧಾರದ ಮೇಲೆ ಯಾರನ್ನೂ ಪ್ರತ್ಯೇಕಿಸುತ್ತಿರಲಿಲ್ಲ.

ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮರು ಆ ದೇಶದಲ್ಲಿ ಯಾವುದೇ ಪ್ರತಿಷ್ಠೆಯನ್ನು ಹೊಂದಿಲ್ಲ. ಏಕೆಂದರೆ, ಅವರು ಭಾರತಕ್ಕೆ ಸೇರಿದವರು ಮತ್ತು ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಿಂದೂ-ಮುಸಲ್ಮಾನರಿಗಿಬ್ಬರಿಗೂ ಒಬ್ಬರೇ ಪೂರ್ವಜರು. ನಮ್ಮ ಪೂಜಾ ವಿಧಾನ ಮಾತ್ರ ವಿಭಿನ್ನವಾಗಿದೆ ಮತ್ತು ನಾವೆಲ್ಲರೂ ನಮ್ಮ ಉದಾರ ಸಂಸ್ಕೃತಿ ಮತ್ತು ಸನಾತನ ಧರ್ಮದ ಬಗ್ಗೆ ಹೆಮ್ಮೆ ಪಡುತ್ತೇವೆ. ಈ ಪರಂಪರೆ ನಮ್ಮನ್ನು ಮುನ್ನಡೆಸುತ್ತದೆ, ಅದಕ್ಕಾಗಿಯೇ ನಾವೆಲ್ಲರೂ ಒಟ್ಟಾಗಿ ಇಲ್ಲಿ ವಾಸಿಸುತ್ತಿದ್ದೇವೆ ಎಂದು ಭಾಗವತ್ ಹೇಳಿದರು.

Last Updated : Oct 13, 2021, 11:19 AM IST

ABOUT THE AUTHOR

...view details