ಕುಲ್ಗಾಮ್(ಜಮ್ಮು-ಕಾಶ್ಮೀರ): ಹಿಜಾಬ್, ಹಲಾಲ್, ಆಜಾನ್ ಧ್ವನಿ ವರ್ಧಕ ವಿವಾದ ಸೇರಿದಂತೆ ಅನೇಕ ವಿಚಾರಗಳಿಗೋಸ್ಕರ ಧರ್ಮ-ಧರ್ಮಗಳ ನಡುವೆ ದ್ವೇಷದ ಜ್ವಾಲೆ ಹಬ್ಬುತ್ತಲೇ ಇರುತ್ತದೆ. ಇದರ ನಡುವೆ ಕೆಲವೊಂದು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗುವ ಘಟನೆಗಳೂ ನಡೆಯುತ್ತಿರುತ್ತವೆ. ಸದ್ಯ ಕುಲ್ಗಾಮ್ದಲ್ಲೊಂದು ಅಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಪರ್ರಾ ಖಾಜಿಗುಂಡ್ನಲ್ಲಿ 80 ವರ್ಷದ ಕಾಶ್ಮೀರಿ ಪಂಡಿತ ಮಹಿಳೆ ನಿನ್ನೆ ಸಂಜೆ ಸಾವನ್ನಪ್ಪಿದ್ದು, ಇಂದು ಮುಸ್ಲಿಂ ಸಮುದಾಯದ ಜನರು ಆಕೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ಅನಂತ್ನಾಗ್ಗೆ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ವೃದ್ಧೆ ಮೃತಪಟ್ಟಿದ್ದಳು.