ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಖಂಡಿಸಿ ಪಂಡಿತರು, ಮುಸ್ಲಿಮರಿಂದ ಪ್ರತಿಭಟನೆ - ಕಾಶ್ಮೀರಿ ಪಂಡಿತರು

ಬುದ್ಗಾಮ್‌ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಖಂಡಿಸಿ ಮುಸ್ಲಿಂ ಮತ್ತು ಕಾಶ್ಮೀರಿ ಪಂಡಿತರು ಸೇರಿಕೊಂಡು ಪ್ರತಿಭಟನೆ ನಡೆಸಿದರು.

Muslims and pandiths held protest togather
ಹಿಂದೂ ಮುಸ್ಲಿಂ ಸೇರಿ ಪ್ರತಿಭಟನೆ

By

Published : Oct 17, 2022, 9:27 PM IST

ಜಮ್ಮು ಕಾಶ್ಮೀರ : ಕಾಶ್ಮೀರಿ ಪಂಡಿತರು, ನಾಗರಿಕರ ಹತ್ಯೆ ಖಂಡಿಸಿ ಸೋಮವಾರ ಬುದ್ಗಾಮ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೈಯಲ್ಲಿ ಮೇಣದಬತ್ತಿ ಹಿಡಿದು ಸ್ಥಳೀಯ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದರು.

ಕಾಶ್ಮೀರಿ ಪಂಡಿತರ ಹತ್ಯೆಗಳು ಇಡೀ ಮನುಕುಲವೇ ತಲೆತಗ್ಗಿಸುವ ಕೃತ್ಯ. ಈ ರೀತಿಯ ಹತ್ಯೆಯು ಕಾಶ್ಮೀರಿಗಳಿಗೆ ಹಾನಿ ಮಾಡುವ ಪ್ರಯತ್ನವಾಗಿದೆ. ಕಾಶ್ಮೀರಿ ಪಂಡಿತರೊಂದಿಗೆ ನಾವಿದ್ದೇವೆ, ಇಂತಹ ಹೇಯ ಕೃತ್ಯ ಮಾಡುವವರನ್ನು ವಿರೋಧಿಸುತ್ತೇವೆ. ಸರ್ಕಾರ ಬಿಗಿ ಕಾನೂನು ಜಾರಿಗೊಳಿಸಿ ದುಷ್ಕೃತ್ಯ ತಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಕಾಶ್ಮೀರಿ ಪಂಡಿತರೂ ಭಾಗವಹಿಸಿದ್ದರು. ನ್ಯಾಯಕ್ಕಾಗಿ ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ :ಒಂದು ಸಿಗರೇಟ್​ ನಿಕೋಟಿನ್ ಮಹಿಳೆಯರ ಈಸ್ಟ್ರೊಜೆನ್ ತಗ್ಗಿಸಬಲ್ಲದು: ಸಂಶೋಧನಾ ವರದಿ

ABOUT THE AUTHOR

...view details