ವಾರಣಾಸಿ: ವಾರಣಾಸಿಯಲ್ಲಿ ತನ್ನ 14 ವರ್ಷಗಳ ಸಂಪ್ರದಾಯ ಮುಂದುವರೆಸಿರುವ ಮುಸ್ಲಿಂ ಮಹಿಳೆಯೊಬ್ಬರು, ದೀಪಾವಳಿ ಅಂಗವಾಗಿ ಶ್ರೀರಾಮನಿಗೆ ಆರತಿ ಬೆಳಗಿದ್ದಾರೆ.
ವಿಶಾಲ್ ಭಾರತ್ ಸಂಸ್ಥೆ ಆಯೋಜಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿ, ಭಗವಾನ್ ಶ್ರೀರಾಮನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. 'ಶ್ರೀರಾಮ ಮಾನವ ಅವತಾರವೆತ್ತಿ ಭೂಮಿಗೆ ಬಂದು ಇಲ್ಲಿನ ರಾಕ್ಷಸರನ್ನು ಸಂಹರಿಸಿದ್ದ. ಈ ಬಳಿಕ ಅಯೋಧ್ಯೆಗೆ ಹಿಂದಿರುಗಿದಾಗ ಅಲ್ಲಿನ ಜನರು ಹಣತೆ ಹಚ್ಚಿ ಸಂಭ್ರಮದಿಂದ ಬರಮಾಡಿಕೊಂಡಿದ್ದರು ಎಂಬುದು ಪ್ರತೀತಿ.
ವಾರಣಾಸಿಯಲ್ಲಿ ಶ್ರೀರಾಮನಿಗೆ ಆರತಿ ಬೆಳಗಿದ ಮುಸ್ಲಿಂ ಮಹಿಳೆ ಮಹಂತ್ ಬಾಲಕ್ ದಾಸ್ ಜಿ ಮಹಾರಾಜ್ ಅವರು ಶ್ರೀರಾಮ್ ಮಹಾ ಆರತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಳೆದ 14 ವರ್ಷಗಳಿಂದ ವಾರಣಾಸಿಯ ಮುಸ್ಲಿಂ ಮಹಿಳಾ ಫೌಂಡೇಷನ್ನ ರಾಷ್ಟ್ರೀಯ ಅಧ್ಯಕ್ಷೆ ನಜ್ನೀನ್ ಅನ್ಸಾರಿ ದೀಪಾವಳಿ ಮತ್ತು ರಾಮ್ ನವಮಿಯಂದು ನಿರಂತರವಾಗಿ ಮಹಾ ಆರತಿ ಬೆಳಗುತ್ತಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆ, ಸಹೋದರತ್ವ ಮತ್ತು ಭಾರತೀಯ ಸಾಂಸ್ಕೃತಿಕ ಏಕತೆ ಪ್ರತನಿಧಿಸುತ್ತಿದ್ದಾರೆ ಎಂದು ಮಹಂತ್ ಬಾಲಕ್ ದಾಸ್ ಹೇಳಿದರು.
ಇಂದು ಧಾರ್ಮಿಕ ಭಯೋತ್ಪಾದನೆಯ ಕತ್ತಲೆ ಇಡೀ ಜಗತ್ತನ್ನೇ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಂಬಿಕೆ ಮತ್ತು ಭಕ್ತಿಯು ಭಯೋತ್ಪಾದನೆ ಸವಾಲು ಮೆಟ್ಟಿ ನಿಲ್ಲಬಹುದು ಎಂದರು.
ನಜ್ನೀನ್ ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಪ್ರಭು ಶ್ರೀರಾಮನ ಮಹಾ ಆರತಿಯನ್ನು ಬೆಳಗಿದ್ದೇವೆ. ನಾವು 'ಸಬ್ ಕಿ ರಾಮ್' (ರಾಮ ಎಲ್ಲರಿಗೂ ಸೇರಿದವ) ಎಂಬ ಘೋಷಣೆ ಅನುಸರಿಸುತ್ತೇವೆ. ಧಾರ್ಮಿಕ ತಾರತಮ್ಯ ತೆಗೆದುಹಾಕುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.