ಮುಂಬೈ: ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
"ಸೂಫಿ ಬಾಬಾ" ಎಂದು ಜನಪ್ರಿಯರಾಗಿದ್ದ ಖ್ವಾಜಾ ಸಯ್ಯದ್ ಚಿಶ್ತಿ ಹತ್ಯೆಯಾದ ವ್ಯಕ್ತಿ. ಮುಂಬೈನಿಂದ 200 ಕಿಮೀ ದೂರದ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದ ತೆರೆದ ಜಾಗದಲ್ಲಿ ಬಾಬಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಕೊಲೆಯಾದ ನಂತರ ಆರೋಪಿಗಳು ಎಸ್‍ಯುವಿ ಕಾರಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಸೂಫಿ ಬಾಬಾನ ಚಾಲಕನೇ ಎನ್ನಲಾಗಿದೆ. ಸಯ್ಯದ್ ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‍ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸಚಿನ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜೀವನ ಹೀಗಿತ್ತು