ಹೈದರಾಬಾದ್(ತೆಲಂಗಾಣ): ಕಳೆದ 18 ವರ್ಷಗಳಿಂದ ಮುಸ್ಲಿಂ ವ್ಯಕ್ತಿಯೊಬ್ಬರು ಸೌಹಾರ್ದತೆ ಮತ್ತು ಸಹೋದರತ್ವವನ್ನು ಪಸರಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ತೆಲಂಗಾಣದ ಹೈದರಾಬಾದ್ನ ರಾಮ್ನಗರದ ನಿವಾಸಿ ಮೊಹಮ್ಮದ್ ಸಿದ್ದಿಕ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ.
"ಎಲ್ಲರೂ ಒಟ್ಟಿಗೆ, ಒಗ್ಗಟ್ಟಿನಿಂದ ಬಾಳಬೇಕು. ನಮ್ಮ ಸ್ನೇಹಿತರಲ್ಲಿಯೂ ನಾವು ಹಿಂದೂ, ಮುಸ್ಲಿಂ ಎಂಬ ಭಾವನೆಯಿಲ್ಲ. ನಮ್ಮೊಂದಿಗೆ ಅವರು ಮಸೀದಿಗೂ ಬರುತ್ತಾರೆ. ಇಫ್ತಾರ್ ಕೂಟದಲ್ಲಿಯೂ ಭಾಗಿಯಾಗುತ್ತಾರೆ. ಹೀಗಾಗಿ, ನಾನು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಅನ್ನದಾನ ಮಾಡುತ್ತೇನೆ. ಗಣೇಶನ ಮೂರ್ತಿ ಪ್ರತಿಷ್ಟಾಪಿಸಲು ಶುರು ಮಾಡಿದಾಗಿನಿಂದಲೂ ಅನೇಕ ರೀತಿಯ ಬೆಳವಣಿಗೆಯನ್ನು ಕಂಡಿದ್ದೇನೆ. ಇಲ್ಲಿನ ಜನರು ನನಗೆ ತುಂಬಾ ಗೌರವ ನೀಡುತ್ತಿದ್ದಾರೆ" ಮೊಹಮ್ಮದ್ ಸಿದ್ದಿಕ್ ಹೇಳುತ್ತಾರೆ.
ಇದನ್ನೂ ಓದಿ:ಮುಂಬೈನ ಪ್ರಸಿದ್ಧ ರಾಜ ಗಣೇಶನ ಹುಂಡಿಯಲ್ಲಿ 2 ಕೆಜಿ ಬೆಳ್ಳಿ, ಬಂಗಾರ