ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ ಎಲ್ಲೆಲ್ಲೂ 'ಬುಲ್ಡೋಜರ್' ಸದ್ದು.. ವಧುವಿನ ಮನೆಗೆ ವರ ತಲುಪಿದ್ದೂ ಇದರಲ್ಲೇ!

ಬಹ್ರೈಚ್ ಜಿಲ್ಲೆಯ ರಿಸಿಯಾ ಬ್ಲಾಕ್‌ನ ಲಕ್ಷ್ಮಣಪುರ ಶಂಕರಪುರ ನಿವಾಸಿ ಸಲೀಂ ಅವರ ಪುತ್ರಿ ರುಬಿನಾ ಅವರನ್ನು ಶ್ರಾವಸ್ತಿ ರಾಜ ಎಂಬುವನೊಂದಿಗೆ ವಿವಾಹ ಮಾಡಿಕೊಡಲಾಗಿದೆ. ವಧುವಿನ ಮನೆಗೆ ವರನನ್ನು ಬುಲ್ಡೋಜರ್‌ನಲ್ಲೇ ಕರೆದೊಯ್ಯಲಾಗಿದೆ.

ಯುಪಿಯಲ್ಲಿ ಎಲ್ಲೆಲ್ಲೂ ಬುಲ್ಡೋಜರ್ ಸದ್ದು
ಯುಪಿಯಲ್ಲಿ ಎಲ್ಲೆಲ್ಲೂ ಬುಲ್ಡೋಜರ್ ಸದ್ದು

By

Published : Jun 19, 2022, 3:47 PM IST

Updated : Jun 19, 2022, 4:06 PM IST

ಬಹ್ರೈಚ್ (ಉತ್ತರಪ್ರದೇಶ) : ಜಿಲ್ಲೆಯ ಶ್ರಾವಸ್ತಿಯಲ್ಲಿ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ಬುಲ್ಡೋಜರ್​​ನಲ್ಲಿ ವರನ ಮೆರವಣಿಗೆ ನಡೆದಿದೆ. ಈ ಬುಲ್ಡೋಜರ್ ಮೆರವಣಿಗೆ ಜನರ ಗಮನ ಸೆಳೆದಿದೆ. ಬುಲ್ಡೋಜರ್ ಉತ್ತರ ಪ್ರದೇಶದ ಯೋಗಿ ಸರ್ಕಾರದ ಎರಡನೇ ಅವಧಿಯ ಕಾರ್ಯಾಚರಣೆಯ ಸಂಕೇತವಾಗಿದ್ದು, ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಿಂದ ಯೋಗಿ ಆದಿತ್ಯನಾಥ್ ಅವರಿಗೆ ಬುಲ್ಡೋಜರ್ ಬಾಬಾ ಎಂಬ ಎಂದೇ ಕರೆಯಲಾಗುತ್ತಿದೆ.

ಬಹ್ರೈಚ್ ಜಿಲ್ಲೆಯ ರಿಸಿಯಾ ಬ್ಲಾಕ್‌ನ ಲಕ್ಷ್ಮಣಪುರ ಶಂಕರಪುರ ನಿವಾಸಿ ಸಲೀಂ ಅವರ ಪುತ್ರಿ ರುಬಿನಾ ಅವರನ್ನು ಶ್ರಾವಸ್ತಿ ರಾಜ ಎಂಬುವನೊಂದಿಗೆ ವಿವಾಹ ಮಾಡಿಕೊಡಲಾಗಿದೆ. ವಧುವಿನ ಮನೆಗೆ ವರನನ್ನು ಬುಲ್ಡೋಜರ್‌ನಲ್ಲಿ ಕರೆದೊಯ್ಯಲಾಗಿದೆ. ಈ ಮೆರವಣಿಗೆಯಲ್ಲಿ 'ಬುಲ್ಡೋಜರ್ ಬಾಬಾ ಕಿ... ಜೈ' ಎಂಬ ಘೋಷಣೆಗಳು ಸಹ ಕೇಳಿಬಂದಿವೆ.

ಎಲ್ಲರೂ ಕಾರುಗಳ ಮೂಲಕ, ಆನೆ ಮತ್ತು ಕುದುರೆಗಳ ಮೇಲೆ ಮೆರವಣಿಗೆ ಮಾಡುವ ಪದ್ಧತಿ ಇದೆ. ಆದರೆ, ನಾವು ಬುಲ್ಡೋಜರ್ ಮೇಲೆ ಮೆರವಣಿಗೆ ಮಾಡಲು ನಿರ್ಧರಿಸಿ ಮದುವೆಯನ್ನು ಅವಿಸ್ಮರಣೀಯವಾಗಿಸಲು ಯೋಚಿಸಿದೆವು ಎಂದು ಪೋಷಕರು ಹೇಳಿದ್ದಾರೆ.

ಯುಪಿಯಲ್ಲಿ ಎಲ್ಲೆಲ್ಲೂ 'ಬುಲ್ಡೋಜರ್' ಸದ್ದು.. ವಧುವಿನ ಮನೆಗೆ ವರ ತಲುಪಿದ್ದೂ ಇದರಲ್ಲೇ!

ಮುಖ್ಯಮಂತ್ರಿ ಯೋಗಿ ಅವರ ಬುಲ್ಡೋಜರ್ ಉತ್ತಮ ಆಡಳಿತದ ಸಂಕೇತವಾಗಿ ಎಲ್ಲಾ ಸಮುದಾಯಗಳಲ್ಲಿ ಜನಪ್ರಿಯವಾಗುತ್ತಿದೆ ಎಂದು ಬಹ್ರೈಚ್ ಸದರ್ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವೆ ಅನುಪಮಾ ಜೈಸ್ವಾಲ್ ಈ ವೇಳೆ ಹೇಳಿದ್ದಾರೆ. ಬುಲ್ಡೋಜರ್ ಅಪರಾಧಿಗಳಿಗೆ ಮಾತ್ರ ಭಯದ ಸಂಕೇತವಾಗಬಹುದು, ಶಾಂತಿ ಪ್ರಿಯ ಸಾಮಾನ್ಯ ಜನರು ಅದನ್ನು ಶಾಂತಿ ಮತ್ತು ಶಿಸ್ತಿನ ಸಂಕೇತವೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಮುಸ್ಲಿಂ ಸಮುದಾಯದ ಮೆರವಣಿಗೆಯಲ್ಲಿ ಅದರ ಭಾಗವಹಿಸುವಿಕೆ ಎಲ್ಲಾ ಸಮುದಾಯಗಳಲ್ಲಿ ಯೋಗಿ ಸರ್ಕಾರದ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ :ದೆಹಲಿಯ ಜಂತರ್ ಮಂತರ್​ನಲ್ಲಿ 'ಅಗ್ನಿಪಥ್' ವಿರುದ್ಧ ಕಾಂಗ್ರೆಸ್ 'ಸತ್ಯಾಗ್ರಹ'

Last Updated : Jun 19, 2022, 4:06 PM IST

ABOUT THE AUTHOR

...view details