ತಿರುಪತಿ: ಅಪರೂಪದ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ದಂಪತಿಯೊಬ್ಬರು ತಿರುಪತಿ ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಚೆನ್ನೈ ಮೂಲದ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ಇವರು ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ತಿರುಮಲದಲ್ಲಿ ಹೊಸದಾಗಿ ನಿರ್ಮಿಸಲಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ 87 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣ, ಪಾತ್ರೆ ಮತ್ತು ಎಸ್‌ವಿ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್ ಇದರಲ್ಲಿ ಸೇರಿವೆ. ದಂಪತಿಯು ದೇಣಿಗೆಯ ಚೆಕ್ ಅನ್ನು ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ನೀಡಿದರು.