ದೇವುಣಿ ಕಡಪ (ಆಂಧ್ರಪ್ರದೇಶ):ಯುಗಾದಿ ಹಬ್ಬ ಆಚರಿಸಲು ಭಕ್ತರ ದಂಡು ದೇವಸ್ಥಾನಗಳಿಗೆ ಹರಿದು ಬರುತ್ತಿದೆ. ತಿರುಮಲ ತಿರುಪತಿಯ ಮೊದಲ ಪ್ರವೇಶ ದ್ವಾರ ಎಂದು ಕರೆಯಲ್ಪಡುವ ದೇವುಣಿ ಕಡಪದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬೀಬಿ ನಾಂಚಾರಮ್ಮನನ್ನು ಮುಸ್ಲಿಂ ಬಾಂಧವರ ತಮ್ಮ ಮಗಳು ಎಂದು ಪರಿಗಣಿಸುತ್ತಾರೆ. ಹೀಗಾಗಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುವುದು ಇಲ್ಲಿ ಸಂಪ್ರದಾಯವಾಗಿದೆ.