ಪಣಜಿ (ಗೋವಾ):ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಯುರ್ವೇದ ತತ್ವಗಳೊಂದಿಗೆ ಸಂಯೋಜಿಸುವುದು ಋತುಬಂಧಕ್ಕೆ ಒಳಗಾಗುವ ಮಹಿಳೆಯರಿಗೆ ಚಿಕಿತ್ಸೆಯ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಸಂಶೋಧಕರೊಬ್ಬರು ತಿಳಿಸಿದರು. ಗೋವಾದಲ್ಲಿ ನಡೆಯುತ್ತಿರುವ ವಿಶ್ವ ಆಯುರ್ವೇದ ಕಾಂಗ್ರೆಸ್ ಮತ್ತು ಎಕ್ಸ್‌ಪೋ 2022ರ 9ನೇ ಆವೃತ್ತಿಯು ಇಂದು ಮುಕ್ತಾಯಗೊಳ್ಳಲಿದೆ. ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮ್‌ನಗರ ಮೂಲದ ಪಿಹೆಚ್‌ಡಿ ವಿದ್ವಾಂಸ ಅನಘಾ ಶಿವಾನಂದನ್, 'ಸಮಯ-ಪರೀಕ್ಷಿತ ರಸಾಯನ ಕಾರ್ಯವಿಧಾನಗಳ ಜೊತೆಗೆ ಕಸ್ಟಮೈಸ್ ಮಾಡಿದ ಸಂಗೀತವು ತಮ್ಮ ಋತುಚಕ್ರದ ಅಂತ್ಯದ ಸಮೀಪವಿರುವ ಮಧ್ಯವಯಸ್ಕ ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ' ಎಂದು ತಿಳಿಸಿದರು.
ಗುಜರಾತ್ ಆಯುರ್ವೇದ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆಯುತ್ತಿರುವ ಅನಘಾ, ತಮ್ಮ ಅಧ್ಯಯನದಲ್ಲಿ ನಾಲ್ಕು ವಾದ್ಯಗಳ ಜೊತೆಗೆ ರಾಗದ ಮಧ್ಯಮಾವತಿಯನ್ನು 20 ನಿಮಿಷಗಳ ಗಾಯನದ ಪ್ಯಾಕೇಜ್ ಆಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಋತುಬಂಧಕ್ಕೊಳಗಾದ ಮಹಿಳೆಯರ ಮಾನಸಿಕ ಮತ್ತು ಅರಿವಿನ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ ಗಮನಿಸಿದ್ದಾರೆ. ಸಂಗೀತದ ಹಸ್ತಕ್ಷೇಪವು ಅದರ ಸ್ವೀಕಾರಾರ್ಹತೆ, ಕಾರ್ಯಸಾಧ್ಯತೆ ಮತ್ತು ಪರಿಣಾಮಕಾರಿತ್ವದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳೊಂದಿಗೆ ಮೆಚ್ಚುಗೆ ಪಡೆದಿದೆ ಎಂದು ಅವರು ವಿವರಿಸಿದರು.