ಕರ್ನಾಟಕ

karnataka

ETV Bharat / bharat

ಬಿಜೆಪಿ ನೀತಿ ಯುವಕರನ್ನು ಉಗ್ರಗಾಮಿತ್ವಕ್ಕೆ ತಳ್ಳುತ್ತಿದೆ : ಮೆಹಬೂಬಾ - ಬಿಜೆಪಿ ಸರ್ಕಾರದ ಮಸ್ಕುಲರ್ ನೀತಿ

370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಉಂಟಾದ ಪರಿಸ್ಥಿತಿಯನ್ನು ನಿಯಂತ್ರಿಸಲು ಮಸ್ಕುಲರ್ ನೀತಿಯನ್ನು ಬಳಸುತ್ತಿರುವ ಬಿಜೆಪಿ ಸರ್ಕಾರದ ಮೇಲೆ ಯುವಕರು ಸಾಕಷ್ಟು ಸಿಟ್ಟಾಗಿದ್ದಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ..

ಬಿಜೆಪಿ ನೀತಿ ಯುವಕರನ್ನು ಉಗ್ರಗಾಮಿತ್ವಕ್ಕೆ ತಳ್ಳುತ್ತಿದೆ: ಮೆಹಬೂಬಾ
ಬಿಜೆಪಿ ನೀತಿ ಯುವಕರನ್ನು ಉಗ್ರಗಾಮಿತ್ವಕ್ಕೆ ತಳ್ಳುತ್ತಿದೆ: ಮೆಹಬೂಬಾ

By

Published : May 29, 2022, 5:31 PM IST

ಶ್ರೀನಗರ: ಬಿಜೆಪಿ ಸರ್ಕಾರದ ಮಸ್ಕುಲರ್ ನೀತಿ ಕಾಶ್ಮೀರದಲ್ಲಿ ಯುವಕರನ್ನು ಉಗ್ರಗಾಮಿತ್ವದತ್ತ ತಳ್ಳುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಉಂಟಾದ ಪರಿಸ್ಥಿತಿಯನ್ನು ನಿಯಂತ್ರಿಸಲು ಮಸ್ಕುಲರ್ ನೀತಿಯನ್ನು ಬಳಸುತ್ತಿರುವ ಬಿಜೆಪಿ ಸರ್ಕಾರದ ಮೇಲೆ ಯುವಕರು ಸಾಕಷ್ಟು ಸಿಟ್ಟಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀನಗರದಲ್ಲಿನ ತಮ್ಮ ಸಗುಪ್ಕರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಬೂಬಾ, ಮಸ್ಕುಲರ್ ನೀತಿ ಮತ್ತು ಯುವಕರನ್ನು ಬಂಧಿಸುವ ಬದಲು, ಮುಫ್ತಿ ಸಯೀದ್ ಮತ್ತು ಭಾರತದ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರು ಪ್ರಾರಂಭಿಸಿದ ಹೀಲಿಂಗ್​ ಟಚ್​ ನೀತಿಯನ್ನು ಸರ್ಕಾರ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಕುರಿತ ಪ್ರಶ್ನೆಗೆ ಉತ್ತರಿಸಿದ ಮೆಹಬೂಬಾ, ಬಿಜೆಪಿ ಸರ್ಕಾರವು PAGDಯ ಏಕತೆಗೆ ಹೆದರಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿಗತಿ ಸರಿ ಇಲ್ಲ: ಸಚಿವ ಕಾರಜೋಳ

ABOUT THE AUTHOR

...view details