ಪುಣೆ( ಮಹಾರಾಷ್ಟ್ರ):ದ್ವಿಚಕ್ರ ವಾಹನಕ್ಕೆ ದಾರಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ಪುಣೆಯಲ್ಲಿ ಮೂವರು ದಾಳಿ ಮಾಡಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾರೆ. ಪುಣೆಯ ಮುಲ್ಶಿ ತಾಲೂಕಿನ ಅಂದಗಾಂವ್‌ನಲ್ಲಿ ಭಾನುವಾರ ಈ ಆಘಾತಕಾರಿ ಘಟನೆ ನಡೆದಿದೆ. ದ್ವಿಚಕ್ರ ವಾಹನದ ವಿಚಾರವಾಗಿ ನಡೆದ ಜಗಳದಲ್ಲಿ 38 ವರ್ಷದ ಬೈಕ್ ಸವಾರನನ್ನು ಮೂವರು ಹೊಡೆದು ಕೊಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾವಲ್ ತಾಲೂಕಿನ ತುಂಗಿಯ ಸುಭಾಷ್ ವಿಠ್ಠಲ್ ವಾಘ್ಮಾರೆ ಮುಂಬೈನ ಅಂಧೇರಿಯಲ್ಲಿ ಖಾಸಗಿ ಐಷಾರಾಮಿ ಬಸ್ನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕ್ಷುಲ್ಲಕ್ಕ ಕಾರಣಕ್ಕೆ ಸುಭಾಷ್ ವಿಠಲ್ನನ್ನು ರಾಜೇಂದ್ರ ಜಗನ್ನಾಥ್ ಮೋಹೋಲ್, ಸಂಗ್ರಾಮ್ ಸುರೇಶ್ ಮೋಹೋಲ್ ಮತ್ತು ಸಮೀರ್ ದೀಪಕ್ ಕರ್ಪೆ ಎಂಬ ಮೂವರು ಹೊಡೆದು ಕೊಂದಿದ್ದಾರೆ.
ಏನಿದು ಪ್ರಕರಣ?: ಸುಭಾಷ್ ವಿಠ್ಠಲ್ ವಾಘ್ಮಾರೆ ಅವರ ಚಿಕ್ಕಮ್ಮ ಮೇ 6 ರಂದು ನಿಧನರಾಗಿದ್ದರು. ಅಂತ್ಯ ಕ್ರಿಯೆಗೆ ಎಂದು ವಾಘಮಾರ್ ಪುಣೆಯ ಲೋನಾವ್ಲಾಗೆ ಬಂದಿದ್ದರು. ಮಾವಲ್ ತಾಲೂಕಿನ ತುಂಗಿಯಿಂದ ಸುಭಾಷ್ ವಾಘಮಾರೆ ದ್ವಿಚಕ್ರ ವಾಹನದಲ್ಲಿ ಉರ್ವೇದ್ ಲಾವಾಸಾ ಮಾರ್ಗವಾಗಿ ಅಂದಗಾಂವ್‌ಗೆ ತೆರಳುತ್ತಿದ್ದರು.
ಸುಭಾಷ್ ಜತೆ ಅವರ ಸೋದರ ಸಂಬಂಧಿ ರಾಜೇಶ್ ಅಂಕುಶ್ ಕುಮಾರ್ ಸಹ ಇದ್ದರು. ಈ ವೇಳೆ ರಾಜೇಂದ್ರ ಮೊಹಲ್ ಎಂಬಾತ ಇವರ ದ್ವಿಚಕ್ರ ವಾಹನವನ್ನು ಹಿಂದಿಕ್ಕಲು ಯತ್ನಿಸಿದ್ದಾರೆ. ಆದರೆ, ವಾಘ್ಮಾರೆ ಇವರಿಗೆ ದಾರಿ ಬಿಟ್ಟುಕೊಟ್ಟಿಲ್ಲ ಇದರಿಂದ ಕೋಪಗೊಂಡ ರಾಜೇಂದ್ರ ಮೊಹೋಲ್, ವಾಘ್ಮಾರೆಯನ್ನು ಹಿಂಬಾಲಿಸಿ, ಸುಭಾಷ್ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಇಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಇದರಿಂದ ರೊಚ್ಚಿಗೆದ್ದ ರಾಜೇಂದ್ರ ತನ್ನಿಬ್ಬರು ಸಹಚರರನ್ನು ಸ್ಥಳಕ್ಕೆ ಕರೆಸಿ, ಸುಭಾಷ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಹೊಡೆದಾಟದಲ್ಲಿ ಸುಭಾಷ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
ವಾಘಮಾರೆ ಮುಂಬೈನ ಅಂಧೇರಿಯಲ್ಲಿ ಖಾಸಗಿ ಐಷಾರಾಮಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಭಾಷ್ ವಾಘ್ಮಾರೆಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಇವರೆಲ್ಲ ಅಂದಗಾಂವ್‌ನಲ್ಲಿ ವಾಸಿಸುತ್ತಿದ್ದಾರೆ. ಭಾನುವಾರವಷ್ಟೇ ಇವರು ಪತ್ನಿ, ಮಕ್ಕಳನ್ನು ಭೇಟಿ ಮಾಡಲು ತೆರಳಿದ್ದರು. ಆದರೆ ಇವರಿಗೆ ತನ್ನ ಹೆಂಡತಿ ಮಕ್ಕಳನ್ನು ನೋಡಲು ಸಾಧ್ಯವಾಗಲೇ ಇಲ್ಲ.
ಇದನ್ನು ಓದಿ:ಮದುವೆ ಕಾರ್ಡ್ ಹಂಚಲು ತೆರಳಿದ್ದ ವಧು ಕಿಡ್ನ್ಯಾಪ್, ಸಾಮೂಹಿಕ ಅತ್ಯಾಚಾರ.. 20 ದಿನದ ಬಳಿಕ ಪೋಷಕರ ಮಡಿಲು ಸೇರಿದ ಸಂತ್ರಸ್ತೆ!