ಕರ್ನಾಟಕ

karnataka

ETV Bharat / bharat

ಲಾಡ್ಜ್​​ನಲ್ಲಿ ಅಪ್ರಾಪ್ತೆಯ ಕೊಂದು, ಆತ್ಮಹತ್ಯೆಗೆ ಶರಣಾದ ಯುವಕ - ಅಪ್ರಾಪ್ತೆ ಕೊಂದು ಆತ್ಮಹತ್ಯೆ

ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆಯನ್ನು ಲಾಡ್ಜ್​ಗೆ ಕರೆದುಕೊಂಡು ಹೋಗಿರುವ ಯುವಕ ಆಕೆಯನ್ನು ಕೊಲೆ ಮಾಡಿದ್ದು, ಹೊರಗಡೆ ಬಂದ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

MURDER OF A MINOR GIRL IN A LODGE IN VASAI  Man murder women in maharashtra  ಲಾಡ್ಜ್​​ನಲ್ಲಿ ಅಪ್ರಾಪ್ತೆ ಕೊಂದ ಯುವಕ  ಅಪ್ರಾಪ್ತೆ ಕೊಂದು ಆತ್ಮಹತ್ಯೆ  ಮಹಾರಾಷ್ಟ್ರ ಪಾಲ್ಗರ್​ನಲ್ಲಿ ಘಟನೆ
ಆತ್ಮಹತ್ಯೆಗೆ ಶರಣಾದ ಯುವಕ

By

Published : Apr 14, 2022, 9:23 PM IST

Updated : Apr 16, 2022, 10:24 AM IST

ಪಾಲ್ಗರ್​(ಮಹಾರಾಷ್ಟ್ರ):ವಸಾಯಿಯಲ್ಲಿನ ಲಾಡ್ಜ್​ವೊಂದರಲ್ಲಿ ಅಪ್ರಾಪ್ತೆಯ ಕೊಲೆ ಮಾಡಿರುವ ಯುವಕನೋರ್ವ ತಂದನಂತರ ರೈಲು ಹಳಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಕಲಾಂಬ್ ಲಾಡ್ಜ್​ನಲ್ಲಿ ಬಾಲಕಿಯನ್ನು ಕೊಂದು, ತದನಂತರ ಆತನೂ ಸಾವಿಗೆ ಶರಣಾಗಿದ್ದಾನೆ.

21 ವರ್ಷದ ಅಭಿಷೇಕ್ ಶಾ ತನ್ನ 17 ವರ್ಷದ ಗೆಳತಿಯೊಂದಿಗೆ ಲಾಡ್ಜ್​​ವೊಂದಕ್ಕೆ ಬಂದಿದ್ದನು. ಕೆಲ ಸಮಯದ ಬಳಿಕ ಆತ ಊಟ ತರುವುದಾಗಿ ಲಾಡ್ಜ್ ಮಾಲೀಕರಿಗೆ ಹೇಳಿ ಹೊರಹೋಗಿದ್ದಾನೆ. ತುಂಬಾ ಸಮಯವಾದ್ರೂ ಹಿಂತಿರುಗಲಿಲ್ಲ. ಹೀಗಾಗಿ ಲಾಡ್ಜ್ ಮಾಲೀಕರು ಕೋಣೆಗೆ ಹೋಗಿ ನೋಡಿದಾಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದ್ದು, ಈ ವೇಳೆ ರೈಲಿನಡಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.

ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ಆಲಿಯಾ-ರಣ್​ಬೀರ್​​: ನೋಡಿ Mr And Mrs ಕಪೂರ್ ಜೋಡಿ!

ಮೃತ ಬಾಲಕಿ ಅಪ್ರಾಪ್ತೆಯಾಗಿದ್ದು, ಆಕೆ ಲಾಡ್ಜ್​ಗೆ ಬಂದಿದ್ದು ಹೇಗೆ? ಅವರಿಗೆ ಲಾಡ್ಜ್ ಮಾಲೀಕರು ರೂಂನಲ್ಲಿರಲು ಅವಕಾಶ ನೀಡಿದ್ದು ಯಾವ ಆಧಾರದ ಮೇಲೆ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.

Last Updated : Apr 16, 2022, 10:24 AM IST

ABOUT THE AUTHOR

...view details