ಕರ್ನಾಟಕ

karnataka

ETV Bharat / bharat

ಪಾಗಲ್​ ಪ್ರೇಮಿ: ಪ್ರೀತಿ ನಿರಾಕರಿಸಿದ್ದ ಯುವತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನ - ಯುವತಿ ಮೇಲೆ ಹಲ್ಲೆ ನಡೆಸಿದ ಯುವಕ

ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವಕನೊಬ್ಬ ಯುವತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತದನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

MURDER ATTEMPT ON YOUNG WOMAN
MURDER ATTEMPT ON YOUNG WOMAN

By

Published : May 8, 2021, 7:27 PM IST

ಜಬಿತಾಪುರ​(ತೆಲಂಗಾಣ):ತನ್ನನ್ನು ಪ್ರೀತಿ ಮಾಡದ ಕಾರಣಕ್ಕಾಗಿ ಯುವಕನೊಬ್ಬ ಯುವತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತದನಂತರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಜಬಿತಾಪುರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ

ಲವ್​ ಮಾಡುವಂತೆ ಕೇಳಿಕೊಂಡಿದ್ದು, ಅದಕ್ಕೆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಆತ ಈ ಕೃತ್ಯವೆಸಗಿದ್ದಾಗಿ ತಿಳಿದು ಬಂದಿದೆ. ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯುವಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಯುವತಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಇದನ್ನೂ ಓದಿ: ವೈದ್ಯ ಪತಿಗೆ ಕೊರೊನಾ ಸೋಂಕು, ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಹೆಂಡತಿ

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಡಿಎಸ್​ಪಿ ವೆಂಕಟ್ ರಮನ್​, ಯುವಕ ಮಡಿಪಲ್ಲಿ ಮಂಡಲದ ನಿವಾಸಿಯಾಗಿದ್ದು, ಆತನನ್ನು ಇದುವರೆಗೆ ಸಂತ್ರಸ್ತೆ ಮಹಿಳೆ ಮನೆಯವರು ನೋಡಿಲ್ಲ ಎಂದು ತಿಳಿಸಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ABOUT THE AUTHOR

...view details