ಗುಮ್ಲಾ (ಜಾರ್ಖಂಡ್): ಖಾದಿ ಒರಾನ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿ ರಾಮಚಂದ್ರ ಒರಾನ್ ಎಂಬಾತನನ್ನು ಗ್ರಾಮಸ್ಥರು ಥಳಿಸಿ ಕೊಂದು ಹಾಕಿರುವ ಘಟನೆ ಜಾರ್ಖಂಡ್‌ನ ಗುಮ್ಲಾದಲ್ಲಿ ನಡೆದಿದೆ.
ಪೊಲೀಸರ ನಿರ್ಲಕ್ಷ್ಯದಿಂದ ಕೊಲೆ ಆರೋಪಿಯನ್ನು ಕೊಂದ ಸ್ಥಳೀಯರು : ಜಾರ್ಖಂಡ್ನಲ್ಲಿ ಘಟನೆ - ಜಾರ್ಖಂಡ್‌ನ ಗುಮ್ಲಾ
ಹೋಟೆಲ್ಯೊಂದರ ಬಳಿ ಖಾದಿ ಒರಾನ್ ಎಂಬಾತನನ್ನು ಗುರುವಾರ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಈ ಘಟನೆ ನಂತರವೂ ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆ ಕೊಲೆ ಆರೋಪಿಯನ್ನು ಸ್ಥಳೀಯರು ಹತ್ಯೆ ಮಾಡಿದ್ದಾರೆ..
ಗುಮ್ಲಾ ಜಿಲ್ಲೆಯ ಘಘ್ರಾ ಪಿಎಸ್ ವ್ಯಾಪ್ತಿಯ ಘುಗರು ಪಾಥಾ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಹೋಟೆಲ್ಯೊಂದರ ಬಳಿ ಖಾದಿ ಒರಾನ್ ಎಂಬಾತನನ್ನು ಗುರುವಾರ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಈ ಘಟನೆ ನಂತರವೂ ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆ ಕೊಲೆ ಆರೋಪಿಯನ್ನು ಸ್ಥಳೀಯರು ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೊಲೆಯಾಗಿದ್ದ ಖಾದಿ ಒರಾನ್ ಪುತ್ರಿ ನೀಲಂ ಕುಮಾರಿ, ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಘಟನಾ ಸ್ಥಳಕ್ಕೆ ತನಿಖೆ ನಡೆಸಿದ್ದರೆ ಸಾಕ್ಷ್ಯಗಳನ್ನು ಪಡೆಯಬಹುದಿತ್ತು. ಆದರೆ, ಪೊಲೀಸರು ಕೊಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.