ಮುಂಬೈ:ದೇಶಾದ್ಯಂತ 2ನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು, ಲಕ್ಷಾಂತರ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.
ಇದೀಗ ಮಹಾರಾಷ್ಟ್ರದಲ್ಲಿ 100 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನವೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ವ್ಯಾಕ್ಸಿನೇಷನ್ ಸೆಂಟರ್ನಲ್ಲಿ 100 ವರ್ಷದ ವೃದ್ಧೆ ಪಾರ್ವತಿ ಕೇಡ್ಕರ್ ಲಸಿಕೆ ಪಡೆದುಕೊಂಡಿದ್ದು, ಇದಾದ ಬಳಿಕ ಅಲ್ಲೇ ಕೇಕ್ ಕತ್ತರಿಸಿದ್ದಾರೆ.