ಮುಂಬೈ:ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(ಐಇಸಿ) ಅಧಿವೇಶನದ ಆತಿಥ್ಯವನ್ನು ವಹಿಸುವ ಅವಕಾಶವನ್ನು ಭಾರತ ಪಡೆದುಕೊಂಡಿದೆ. ಈ ಮೂಲಕ 40 ವರ್ಷಗಳ ಬಳಿಕ ಐಒಸಿ ಸಭೆ ಭಾರತದಲ್ಲಿ ನಡೆಯಲಿದೆ. 2023 ರಲ್ಲಿ ಮುಂಬೈನಲ್ಲಿ ಈ ಸಭೆ ನಡೆಯಲಿದ್ದು, ಭವಿಷ್ಯದಲ್ಲಿ ಒಲಿಂಪಿಕ್ಸ್ ಕೂಟವನ್ನು ಆಯೋಜಿಸುವ ಭಾರತದ ಯೋಜನೆಗೆ ಈ ಸಭೆ ಪ್ರಮುಖವಾಗಿದೆ.
2023 ರಲ್ಲಿ ಮುಂಬೈನಲ್ಲಿ ನಡೆಯುತ್ತೆ ಒಲಿಂಪಿಕ್ಸ್ ಸಭೆ.. 40 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆ - ಭಾರತದಲ್ಲಿ ಮುಂದಿನ ಒಲಿಂಪಿಕ್ಸ್ ಸಭೆ
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(ಐಇಸಿ) ಅಧಿವೇಶನದ ಆತಿಥ್ಯವನ್ನು ವಹಿಸುವ ಅವಕಾಶವನ್ನು ಭಾರತ ಪಡೆದುಕೊಂಡಿದೆ.
ಒಲಿಂಪಿಕ್ಸ್ ಸಭೆ
ಈ ಹಿಂದೆ 2019ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧಿವೇಶನ ಆಯೋಜಿಸಲು ಭಾರತ ಆಸಕ್ತಿ ವಹಿಸಿತ್ತು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದೀಗ ಐಒಸಿ ಉಪಾಧ್ಯಕ್ಷ ಎನ್‌ಜಿ ಸೆರ್ ಮಿಯಾಂಗೊ ಮುಂದಿನ ಅಧಿವೇಶನಕ್ಕಾಗಿ ಮುಂಬೈಯನ್ನು ನಾಮನಿರ್ದೇಶನ ಮಾಡಿದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಭಾರತದಲ್ಲಿಯೇ ಸಭೆ ನಡೆಸುವ ನಿರ್ಧಾರಕ್ಕೆ ಅಂತಿಮ ಮುದ್ರೆ ಒತ್ತಿದ್ದಾರೆ.
ಓದಿ:ವಿರಾಟ್ ಕೊಹ್ಲಿ, ರಿಷಭ್ ಪಂತ್ಗೆ 10 ದಿನಗಳ ವಿಶ್ರಾಂತಿ.. ಶ್ರೀಲಂಕಾ ವಿರುದ್ಧದ ಟೆಸ್ಟ್ಗೆ ವಾಪಸ್