ಕರ್ನಾಟಕ

karnataka

ETV Bharat / bharat

ಮುಂಬೈನಲ್ಲಿ 1,377 ಹೊಸ ಕೋವಿಡ್​​ ಕೇಸ್​​ ಪತ್ತೆ: 7 ತಿಂಗಳ ಬಳಿಕ ಗರಿಷ್ಠ ಏರಿಕೆ - ಮುಂಬೈ ಕೋವಿಡ್-19 ಅಪ್ಡೇಟ್​​

ಮುಂಬೈನಲ್ಲಿ ನಿನ್ನೆ (ಮಂಗಳವಾರ) 1,377 ಹೊಸ ಕೋವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 7 ತಿಂಗಳ ಬಳಿಕ ಗರಿಷ್ಠ ಪ್ರಕರಣಗಳು ದಾಖಲಾಗಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Dec 29, 2021, 12:27 PM IST

ಮುಂಬೈ: ನಗರದಲ್ಲಿ ಮಂಗಳವಾರ 1,377 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,73,298ಕ್ಕೆ ಏರಿಕೆಯಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಿಳಿಸಿದೆ.

ನಿನ್ನೆ 338 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 7,48,537 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 5,803 ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆಯ ಪ್ರಮಾಣ ಶೇ.97 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 32,369 ಸ್ವ್ಯಾಬ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 1,35,24,610 ಟೆಸ್ಟ್​​ ಮಾಡಲಾಗಿದೆ. ಪಾಸಿಟಿಟಿ ದರ 0.07 ರಷ್ಟಿದೆ.

ಕೋವಿಡ್ ಉಲ್ಬಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಡಿ.25ರಿಂದ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಈ ಆದೇಶ ಮುಂದಿನ ನಿರ್ದೇಶನದವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುಂಚಿತವಾಗಿ ಔತಣ ಕೂಟ ಮತ್ತು ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ:ಬ್ಯಾಡ್ಮಿಂಟನ್ ಟೂರ್ನಮೆಂಟ್: ಇಂದ್ರಪ್ರಸ್ಥ ಅಪಾರ್ಟ್​ಮೆಂಟ್​ನಲ್ಲಿ 27 ಮಂದಿಗೆ ಕೋವಿಡ್

ABOUT THE AUTHOR

...view details