ಮುಂಬೈ:ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದೆ. ಮನೆಗಳಿಂದ ಜನರು ಹೊರಬಾರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಗಾಂಧಿ ಮಾರುಕಟ್ಟೆ ಸಂಪೂರ್ಣ ಜಲಾವೃತವಾಗಿದ್ದು, ನೈರುತ್ಯ ಮಾರ್ಗದ ರೈಲ್ವೆ ಮಾರ್ಗಗಳು, ಮಾರುಕಟ್ಟೆಗಳು ಮುಳುಗಡೆಯಾಗಿವೆ.
ಈ ಮಹಾನಗರಿಯಲ್ಲಿ ವರುಣನಾರ್ಭಟ.. ರೈಲ್ವೆ ಹಳಿಗಳು, ಮಾರುಕಟ್ಟೆಗಳು ಜಲಾವೃತ! - ರೈಲ್ವೆ ಹಳಿಗಳು, ಮಾರುಕಟ್ಟೆಗಳು ಜಲಾವೃತ
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವು ರೈಲುಗಳು ತಡವಾಗಿ ಹೊರಡಲಿದ್ದು, ಕೆಲ ರೈಲುಗಳ ಸಂಚಾರ ಸ್ತಬ್ಧಗೊಂಡಿದೆ.
ರೈಲ್ವೆ ಹಳಿಗಳು, ಮಾರುಕಟ್ಟೆಗಳು ಜಲಾವೃತ
ಹಲವರು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಕೆಲ ರೈಲುಗಳು ತಡವಾಗಿ ಹೊರಡಲಿವೆ. ಮುಂದಿನ 24 ಗಂಟೆವರೆಗೆ ಧಾರಾಕಾರ ಮಳೆಯಾವುದರಿಂದ ಬಸ್ಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮಣ್ಣು ಕುಸಿತ: ಅಪಾಯದಲ್ಲಿದೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ