ಕರ್ನಾಟಕ

karnataka

By

Published : Mar 27, 2021, 10:04 AM IST

ETV Bharat / bharat

ಬೆಂಕಿ ಅನಾಹುತದಲ್ಲಿ 11 ಕೋವಿಡ್​ ರೋಗಿಗಳ ಸಾವು: ಆಸ್ಪತ್ರೆ ವಿರುದ್ಧ ಎಫ್​ಐಆರ್​ ದಾಖಲು

ಮುಂಬೈನ ಕೋವಿಡ್ ಆಸ್ಪತ್ರೆ ದುರಂತ ಸಂಬಂಧ ಆಸ್ಪತ್ರೆಯ ನಿರ್ದೇಶಕ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ​ ದಾಖಲಿಸಿಕೊಂಡಿದ್ದಾರೆ.

Sunrise Hospital
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಮುಂಬೈ:ನಿನ್ನೆ ಕೋವಿಡ್​​-19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ 11 ರೋಗಿಗಳು ಮೃತಪಟ್ಟಿದ್ದ ಘಟನೆ ಸಂಬಂಧ ಇದೀಗ ಆಸ್ಪತ್ರೆ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮುಂಬೈನ ಭಾಂಡುಪ್​ ಪ್ರದೇಶದಲ್ಲಿನ ಡ್ರೀಮ್ಸ್​​ ಶಾಪಿಂಗ್​ ಮಾಲ್​​ನಲ್ಲಿರುವ ಸನ್​ರೈಸ್​ ಖಾಸಗಿ ಆಸ್ಪತ್ರೆಯನ್ನು ಕೋವಿಡ್​ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ನಿನ್ನೆ ಇಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 9 ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದರು. 70ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಣೆ ಮಾಡಲಾಗಿತ್ತು.

ಇದನ್ನೂ ಓದಿ: ಪಶ್ಚಿಮ ಬಂಗಾಳ; ಚುನಾವಣಾ ಕಾರ್ಯ ನಿರತ ಬಸ್​ಗೆ ಬೆಂಕಿ.. ವಿಡಿಯೋ

ಘಟನೆ ಸಂಬಂಧ ಸನ್‌ರೈಸ್ ಆಸ್ಪತ್ರೆಯ ನಿರ್ದೇಶಕ ಅಮಿತ್ ಸಿಂಗ್ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಭಾಂಡುಪ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details