ಮುಂಬೈ (ಮಹಾರಾಷ್ಟ್ರ):ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಟೀಕಿಸಿದ ಸಾಹಿತ್ಯವಿರುವ ಹಾಡುಗಳನ್ನು ಹಾಡಿರುವ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ರ್ಯಾಪರ್ಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕೆಲವು ವಾರದ ಅವಧಿಯಲ್ಲಿ ಇಬ್ಬರು ರ್ಯಾಪರ್ಗಳ ಮೇಲೆ ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಲಾಗಿದ್ದು, ವಿಚಾರಣೆಗೂ ಒಳಪಡಿಸಲಾಗಿದೆ.
ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದಲ್ಲಿ ಬುಧವಾರ ರ‍್ಯಾಪರ್ ರಾಜ್ ಮುಂಗ್ಸೆ ವಿರುದ್ಧ ಥಾಣೆ ಜಿಲ್ಲೆಯ ಅಂಬರನಾಥ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರ‍್ಯಾಪರ್ ರಾಜ್ ಮುಂಗ್ಸೆ ತಮ್ಮ ಹಾಡಿನಲ್ಲಿ ಯಾರ ಹೆಸರನ್ನೂ ಬಳಸದೆ ಬಳಸದೇ ಸರ್ಕಾರವನ್ನು ಟೀಕಿಸಿದ್ದರು ಎನ್ನಲಾಗಿದೆ.
ಮತ್ತೊಂದೆಡೆ, ಶುಕ್ರವಾರ ಮುಂಬೈನ ವಡಾಲಾ ಪ್ರದೇಶದ ರ‍್ಯಾಪರ್ ಉಮೇಶ್ ಖಾಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪರಾಧ ಗುಪ್ತಚರ ಘಟಕದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ರ‍್ಯಾಪರ್ ಉಮೇಶ್ ಖಾಡೆ "ಭೋಂಗ್ಲಿ ಕೇಲಿ ಜನತಾ" (ಜನರು ಎದುರಿಸುತ್ತಿರುವ ನೋವು ಉಲ್ಲೇಖಿಸಿ) ಎಂಬ ರಚಿಸಿದ್ದರು. ಇದನ್ನು ಖಾಡೆ ತಮ್ಮ ಶಂಭೋ ಎಂಬ ಖಾತೆಯ ಹೆಸರನ್ನು ಹೊಂದಿರುವ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಾಡು ವೈರಲ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.