ಕರ್ನಾಟಕ

karnataka

ETV Bharat / bharat

ಸುಲಿಗೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಪರಮ್​ ಬೀರ್ ಸಿಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಉದ್ಯಮಿ ಎರಡು ಬಾರ್​​ ಮತ್ತು ರೆಸ್ಟೋರೆಂಟ್​ಗಳ ಮೇಲೆ ದಾಳಿ ಮಾಡದಿರಲು ಆರೋಪಿಗಳು 9 ಲಕ್ಷ ರೂಪಾಯಿ ಸುಲಿಗೆ ಹಾಗೂ 2.92 ಲಕ್ಷ ಬೆಲೆಯ ಎರಡು ಸ್ಮಾರ್ಟ್​ ಫೋನ್ ಖರೀದಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.

param-bir-singh
ಮಾಜಿ ಪೊಲೀಸ್ ಅಧಿಕಾರಿ ಪರಮ್​ ಬೀರ್ ಸಿಂಗ್

By

Published : Dec 4, 2021, 9:40 PM IST

ಮುಂಬೈ: ಉದ್ಯಮಿಯೊಬ್ಬರಿಂದ ಹಣ ಸುಲಿಗೆ ಮಾಡಿದ್ದ ಆರೋಪ ಎದುರಿಸುತ್ತಿರುವ ಮಾಜಿ ನಗರ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಚಾರ್ಜ್​​​​​ಶೀಟ್ ಸಲ್ಲಿಸಿದ್ದಾರೆ.

ಹಲವು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿರುವ ಸಿಂಗ್ ಹಾಗೂ ಇತರ ಮೂವರ ವಿರುದ್ಧ ಇದು ಮೊದಲ ಚಾರ್ಜ್ ಶೀಟ್ ಆಗಿದೆ. ಈ ಮೊದಲು ಪರಮ್​ ಬೀರ್ ಸಿಂಗ್ ಅವರ ಮೇಲೆ ಸುಲಿಗೆ ಆರೋಪ ಕೇಳಿ ಬರುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು.

ಪರಮ್ ಬೀರ್ ಸಿಂಗ್ ಅಲ್ಲದೇ, ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಸುಮಿತ್ ಸಿಂಗ್ ಮತ್ತು ಅಲ್ಪೇಶ್ ಪಟೇಲ್ ಅವರನ್ನು ಚಾರ್ಜ್ ಶೀಟ್​​ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ ಭಾಜಿಪಾಲೆ ಅವರ ಮುಂದೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಬಿಮಲ್ ಅಗರ್ವಾಲ್ ಅವರ ನೀಡಿದ್ದ ದೂರಿನ ಅನ್ವಯ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಿಮಲ್ ನಡೆಸುತ್ತಿದ್ದ ಎರಡು ಬಾರ್​​ ಮತ್ತು ರೆಸ್ಟೋರೆಂಟ್​ಗಳ ಮೇಲೆ ದಾಳಿ ಮಾಡದಿರಲು ಆರೋಪಿಗಳು 9 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಗಿ ಹಾಗೂ 2.92 ಲಕ್ಷ ಬೆಲೆಯ ಎರಡು ಸ್ಮಾರ್ಟ್​ ಫೋನ್ ಖರೀದಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ 6 ಮಂದಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384 ಮತ್ತು 385 ಮತ್ತು 34ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ಪ್ರೀತಿಸಿ, ಮೋಸ ಮಾಡಿದ ಯುವಕ.. ಆ್ಯಸಿಡ್ ದಾಳಿ ನಡೆಸಿದ ಯುವತಿ

ABOUT THE AUTHOR

...view details