ಕರ್ನಾಟಕ

karnataka

ETV Bharat / bharat

ಮಹಾ ಕಠಿಣ ಕರ್ಫ್ಯೂ: ಮುಂಬೈ ತೊರೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸಿದ ವಲಸಿಗರು - ವಲಸೆ ಕಾರ್ಮಿಕರು ಎಲ್‌ಟಿಟಿಯಲ್ಲಿ ಜಮಾ

ಕೋವಿಡ್ 2ನೇ ಅಲೆಯ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಏ.14ರಿಂದ ಮೇ 1ರವರೆಗೆ 15 ದಿನಗಳ ಕಾಲ ರಾಜ್ಯವ್ಯಾಪಿ ಕರ್ಫ್ಯೂ ಘೋಷಿಸಿದರು. ಘೋಷಣೆ ಹೊರಬಿದ್ದ ಸಂಜೆಯಿಂದಲೇ ಮುಂಬೈಯಲ್ಲಿ ಇರುವ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ರೈಲ್ವೆ ನಿಲ್ದಾಣಗಳಲ್ಲಿ ಬಂದು ಸೇರಿದ್ದಾರೆ.

Passenger
Passenger

By

Published : Apr 14, 2021, 2:39 PM IST

ಮುಂಬೈ:ಕೋವಿಡ್​-19 ಸೋಂಕು ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರವು ಇಂದಿನಿಂದ ಮೇ 1ರ ತನಕ ಕಠಿಣ ಲಾಕ್​ಡೌನ್​ ಜಾರಿಗೆ ತರಲಿದೆ. ಇದರಿಂದಾಗಿ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ತವರಿಗೆ ಮರಳಲು ಮುಂಬೈನ ಹಲವು ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸಿದ್ದಾರೆ.

ಕೋವಿಡ್ 2ನೇ ಅಲೆಯ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಏ.14ರಿಂದ ಮೇ 1ರವರೆಗೆ 15 ದಿನಗಳ ಕಾಲ ರಾಜ್ಯವ್ಯಾಪಿ ಕರ್ಫ್ಯೂ ಘೋಷಿಸಿದರು. ಘೋಷಣೆ ಹೊರಬಿದ್ದ ಸಂಜೆಯಿಂದಲೇ ಮುಂಬೈಯಲ್ಲಿ ಇರುವ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ರೈಲ್ವೆ ನಿಲ್ದಾಣಗಳಲ್ಲಿ ಬಂದು ಸೇರಿದ್ದಾರೆ.

ಇದನ್ನೂ ಓದಿ: ಸಿಬಿಎಸ್‌ಇ ಬೋರ್ಡ್​ ಪರೀಕ್ಷೆ ಮುಂದೂಡಿಕೆ? ಶಿಕ್ಷಣ ಸಚಿವರ ಜತೆ ಮೋದಿ ಮಹತ್ವದ ಸಭೆ

ರೈಲು ಹತ್ತಿ ತಮ್ಮ ಊರಿಗೆ ತೆರಳಲು ಲೋಕಮಾನ್ಯ ತಿಲಕ್ ಟರ್ಮಿನಸ್ ಹೊರಗೆ ಬುಧವಾರ ವಲಸಿಗ ಕಾರ್ಮಿಕರು ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಜನರು ಭಯಭೀತರಾಗಬಾರದು. ನಿಲ್ದಾಣಗಳಲ್ಲಿ ಜನಸಂದಣಿ ತಪ್ಪಿಸಬೇಕು ಎಂದು ಕೇಂದ್ರ ವಿಭಾಗ ಮನವಿ ಮಾಡಿದೆ.

ಜನಸಂದಣಿಯನ್ನು ನಿಯಂತ್ರಿಸಲು ರೈಲ್ವೆ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ಹೊರಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.

ಮಂಗಳವಾರ ರಾತ್ರಿ ಠಾಕ್ರೆ ಭಾಷಣದಲ್ಲಿ ಕರ್ಫ್ಯೂ ಘೋಷಿಸಿದ ಕೂಡಲೇ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಂದ ತುಂಬಿತು. ಅನೇಕರು ಲಾಕ್‌ಡೌನ್ ನಿರೀಕ್ಷೆಯಲ್ಲಿದ್ದರು. ಇದು ಕೊನೆಗೂ ದೃಢವಾಯಿತು. ತಮ್ಮ ಊರಿಗೆ ಮರಳಲು ಕಾಯ್ದಿರಿಸಿದ ಟಿಕೆಟ್‌ ಪಡೆಯುವಲ್ಲಿ ಕೆಲವರು ಯಶಸ್ವಿಯಾದರು. ಹಲವಾರು ಜನ ಸಾಮಾನ್ಯ ವಿಭಾಗದ ಟಿಕೆಟ್‌ ಖರೀದಿಸುವ ಮೂಲಕ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು.

ಪ್ರತಿದಿನ ಸೆಂಟ್ರಲ್ ರೈಲ್ವೆ (ಸಿಆರ್) ಮತ್ತು ವೆಸ್ಟರ್ನ್ ರೈಲ್ವೆ (ಡಬ್ಲ್ಯುಆರ್) ಉತ್ತರ ಭಾರತದ ರಾಜ್ಯಗಳಿಗೆ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿಸಿದರು. ಮಂಗಳವಾರ ರಾತ್ರಿಯವರೆಗೆ ಕ್ಕೂ ಅಧಿಕ ಜನರು ವೇಟಿಂಗ್ ಪಟ್ಟಿಯಲ್ಲಿದ್ದಾರೆ. ಮಂಗಳವಾರ ತಡರಾತ್ರಿ ಸಿಎಸ್‌ಎಂಟಿಯಲ್ಲಿ ದೂರದ ಊರಿಗೆ ತೆರಳಲು ರೈಲುಗಳಿಗಾಗಿ ಕಾಯುತ್ತಿದ್ದರು. ಅವರಲ್ಲಿ ಹೆಚ್ಚಿನವರು ಕಳೆದ ವರ್ಷದಲ್ಲಿ ಸಂಭವಿಸಿದ್ದ ಸಾರಿಗೆ ಅಭಾವದಿಂದ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದರು.

ABOUT THE AUTHOR

...view details