ಕರ್ನಾಟಕ

karnataka

ETV Bharat / bharat

ಗೋವಾದಲ್ಲಿ ಮುಂಬೈ ಎಸಿಬಿ ದಾಳಿ.. ಡ್ರಗ್ಸ್​ ವಶ, ಪೆಡ್ಲರ್​ಗಳು ಸೇರಿ ವಿದೇಶಿಗರ ಬಂಧನ! - ಗೋವಾದಲ್ಲಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ದಾಳಿ

ಗೋವಾದಲ್ಲಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಾಳಿ ನಡೆಸಿ ವಿದೇಶಿ ಪ್ರವಾಸಿಗರನ್ನು ಬಂಧಿಸಿದೆ.

Mumbai Narcotics Control Bureau raid  Mumbai Narcotics Control Bureau raid in Goa  NCB raid  NCB raid in Goa  NCB raid news  ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ  ಗೋವಾದಲ್ಲಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ದಾಳಿ  ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸುದ್ದಿ
ಗೋವಾದಲ್ಲಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಾಳಿ

By

Published : Mar 8, 2021, 9:02 AM IST

Updated : Mar 8, 2021, 10:06 AM IST

ಪಣಜಿ (ಗೋವಾ): ಮಹಾರಾಷ್ಟ್ರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಗೋವಾದ ನಗರದಲ್ಲಿ ಅನೇಕ ಕಡೆಯಲ್ಲಿ ದಾಳಿ ನಡೆಸಿದ್ದಾರೆ.

ಎಸಿಬಿ ದಾಳಿಯಲ್ಲಿ ವಿದೇಶಿಯರು ಸೇರಿದಂತೆ ಡ್ರಗ್ಸ್​ ಪೆಡ್ಲರ್​ನನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇದಲ್ಲದೇ ಗೋವಾದಲ್ಲಿ ಅಪಾರ ಪ್ರಮಾಣದ ಡ್ರಗ್ಸ್​ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಲಯ ಅಧಿಕಾರಿ ಸಮೀರ್ ವಾಂಖೆಡೆ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಭಾನುವಾರ ಸಂಜೆ ಗೋವಾದ್ಯಂತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು.

ದೂರವಾಣಿ ಮೂಲಕ ಮಾಧ್ಯಮವೊಂದಕ್ಕೆ ಮಾತನಾಡಿದ ವಾಂಖೆಡೆ, ತಮ್ಮ ತಂಡವು ವಿದೇಶಿಯರು ಸೇರಿದಂತೆ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ. ಬೆಳಗ್ಗೆಯಿಂದಲೂ ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

Last Updated : Mar 8, 2021, 10:06 AM IST

ABOUT THE AUTHOR

...view details