ಮುಂಬೈ (ಮಹಾರಾಷ್ಟ್ರ):ಚಲಿಸುತ್ತಿದ್ದ ಕಾರಿನಲ್ಲಿ ಚಾಲಕ ಮತ್ತು ಸಹ ಪ್ರಯಾಣಿಕರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಆಕೆ ಜೊತೆಗಿದ್ದ 10 ತಿಂಗಳ ಮಗುವನ್ನು ಹೊರ ಎಸೆದು ಕೊಲೆ ಮಾಡಿರುವ ಆರೋಪ ಪ್ರಕರಣ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಖಾಸಗಿ ಶೇರ್ ಕಾರಿನಲ್ಲಿ 20 ವರ್ಷದ ಮಹಿಳೆಯೊಬ್ಬರು ತಮ್ಮ 10 ತಿಂಗಳ ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಚಾಲಕ ಮತ್ತು ಕಾರಿನಲ್ಲಿ ಇತರ ಪ್ರಯಾಣಿಕರು ಸೇರಿಕೊಂಡು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ, ಚಲಿಸುತ್ತಿದ್ದ ಕಾರಿನಿಂದ ಮಗು ಮತ್ತು ಮಹಿಳೆಯನ್ನು ಆರೋಪಿಗಳು ಹೊರಗಡೆ ಎಸೆದಿದ್ದಾರೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.