ಕರ್ನಾಟಕ

karnataka

ETV Bharat / bharat

ಮಹಾ ಆರತಿ ರದ್ದು : ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ ರಾಜ್ ಠಾಕ್ರೆ - ಮಹಾರಾಷ್ಟ್ರದಲ್ಲಿ ಧ್ವನಿವರ್ಧಕದ ಗದ್ದಲ

ನಾಳೆ ಹಿಂದೂಗಳು ಅಕ್ಷಯ ತೃತಿಯ ಹಬ್ಬವನ್ನು ಆಚರಿಸುತ್ತಿರುವಾಗ ಯಾವುದೇ ಆರತಿಗಳನ್ನು ನಡೆಸಬೇಡಿ ಎಂದು ತಮ್ಮ ಕಾರ್ಯಕರ್ತರಲ್ಲಿ ರಾಜ್​ ಠಾಕ್ರೆ ಮನವಿ ಮಾಡಿದ್ದಾರೆ..

ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ  ರಾಜ್ ಠಾಕ್ರೆ
ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ ರಾಜ್ ಠಾಕ್ರೆ

By

Published : May 2, 2022, 5:11 PM IST

ಮುಂಬೈ: ರಾಜ್ಯದಲ್ಲಿ ಧ್ವನಿವರ್ಧಕದ ಗದ್ದಲದ ನಡುವೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಅವರು ಮುಖ್ಯ ಘೋಷಣೆಯೊಂದನ್ನು ಮಾಡಿದ್ದಾರೆ. ನಾಳೆ ನಡೆಯಲಿರುವ 'ಮಹಾ ಆರತಿ'ಯನ್ನು ರದ್ದುಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಮುಸ್ಲಿಮರ ಹಬ್ಬವಾದ ಈದ್‌ನಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂದಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಮಹಾರಾಷ್ಟ್ರದ ಸೈನಿಕರೇ.. ನಾಳೆ ಯಾವುದೇ ಆರತಿಗಳನ್ನು ನಡೆಸಬೇಡಿ ಎಂದು ಒತ್ತಾಯಿಸಿದ್ದಾರೆ. ಭಾರತ ನಾಳೆ ಈದ್ ಆಚರಿಸಲಿದೆ. ನಾನು ನಿನ್ನೆ ಸಂಭಾಜಿನಗರದಲ್ಲಿ ಅದರ ಬಗ್ಗೆ ಮಾತನಾಡಿದ್ದೇನೆ. ಮುಸ್ಲಿಮರು ಈ ಹಬ್ಬವನ್ನು ಯಾವುದೇ ಗೊಂದಲಗಳಿಲ್ಲದೆ ಆಚರಿಸಬೇಕು.

ಪರಿಣಾಮ ಹಿಂದೂ ಹಬ್ಬವಾದ ಅಕ್ಷಯ ತೃತಿಯ ಮುನ್ನಾದಿನದಂದು ಯಾವುದೇ ಆರತಿಗಳನ್ನು ನಡೆಸದಂತೆ ನಾನು ಎಲ್ಲರಿಗೂ ವಿನಂತಿಸುತ್ತೇನೆ. ಬೇರೆ ಸಮುದಾಯಗಳ ಹಬ್ಬ ಹರಿದಿನಗಳಲ್ಲಿ ಅವಾಂತರ ಸೃಷ್ಟಿಸಬಾರದು. ಧ್ವನಿವರ್ಧಕ ಸಮಸ್ಯೆ ಧಾರ್ಮಿಕ ವಿಷಯವಲ್ಲ, ಇದು ಸಾಮಾಜಿಕ ಸಮಸ್ಯೆ ಮತ್ತು ಅದರ ಬಗ್ಗೆ ನಾಳೆ ನಾನು ಟ್ವೀಟ್​ ಮಾಡುವ ಮೂಲಕ ಏನು ಮಾಡಬೇಕೆಂದು ಸ್ಪಷ್ಟಪಡಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಉರಿಯುತ್ತಿರುವ ಧ್ವನಿವರ್ಧಕ ವಿಷಯದಲ್ಲಿ ಠಾಕ್ರೆ ಪ್ರಮುಖರು. ಇದು ಕಳೆದ ವಾರಗಳಲ್ಲಿ ಕೋಮುವಾದದ ಛಾಯೆಯನ್ನು ಕಂಡುಕೊಂಡಿದೆ. ಮಸೀದಿಗಳಲ್ಲಿನ ಆಜಾನ್ ಸ್ಪೀಕರ್‌ಗಳನ್ನು ತೆಗೆದು ಹಾಕದಿದ್ದರೆ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಹೇಳುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದಾದ ನಂತರ ಹಲವಾರು ಭಾಗಗಳಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು.

ಇದನ್ನೂ ಓದಿ: ಕನ್ನಡ ಭಾಷೆ, ನೆಲಕ್ಕೆ ಅಪಚಾರ ಎಸಗುವ ಯಾವುದೇ ಕೆಲಸದಲ್ಲಿ ನಾನು ಭಾಗಿಯಾಗುವುದಿಲ್ಲ: ನಟ ಸುಚೇಂದ್ರ ಪ್ರಸಾದ್

ಈ ಹೇಳಿಕೆಯ ನಂತರ ಏಪ್ರಿಲ್ 19ರಂದು ಅವರು ಮತ್ತೊಂದು ಹೇಳಿಕೆಯೊಂದನ್ನು ನೀಡಿ, ಮೇ 3ರಂದು ನಗರದಲ್ಲಿ ಅಕ್ಷಯ ತೃತಿಯಾ ಮುನ್ನಾದಿನದಂದು ಮಹಾ ಆರತಿಯನ್ನು ನಡೆಸಲಾಗುವುದು ಎಂದು ಘೋಷಿಸಿದ್ದರು.

ABOUT THE AUTHOR

...view details