ಕರ್ನಾಟಕ

karnataka

ETV Bharat / bharat

ಕೋವಿಡ್ ಮಾರ್ಗಸೂಚಿ ಪಾಲಿಸಿ: ಕೈಮುಗಿದು ಮನವಿ ಮಾಡಿದ ಮುಂಬೈ ಮೇಯರ್​​​​! - Mumbai Mayor hits the streets

ಸರ್ಕಾರವನ್ನು ಮತ್ತೊಂದು ಲಾಕ್​ಡೌನ್ ಹೇರುವಂತೆ ಮಾಡಬೇಡಿ. ದಯವಿಟ್ಟು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಎಂದು ಸಾರ್ವಜನಿಕರಲ್ಲಿ ಕಿಶೋರಿ ಪಡ್ನೇಕರ್ ಮನವಿ ಮಾಡಿಕೊಂಡಿದ್ದಾರೆ.

Mumbai Mayor hits the streets, orders people to wear masks
ಕೋವಿಡ್ ಮಾರ್ಗಸೂಚಿ ಪಾಲಿಸಿ: ಕೈಮುಗಿದು ಮನವಿ ಮಾಡಿದ ಮುಂಬೈ ಮೇಯರ್

By

Published : Feb 17, 2021, 7:10 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ವಾಣಿಜ್ಯ ನಗರಿ ಮುಂಬೈನಲ್ಲೂ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಮೇಯರ್ ಅಖಾಡಕ್ಕಿಳಿದಿದ್ದಾರೆ.

ಹೌದು, ಮೇಯರ್ ಕಿಶೋರಿ ಪಡ್ನೇಕರ್ ಬುಧವಾರ ರಸ್ತೆಗಿಳಿದಿದ್ದು, ಮಾಸ್ಕ್​ ಧರಿಸುವಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೈಮುಗಿದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಮಂಗಳವಾರದಿಂದ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದು, ಶೇಕಡಾ 60ರಷ್ಟು ಮಂದಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಮೇಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ 98% ಇಂಟರ್ನೆಟ್ ಸಂಪರ್ಕ ಸಂಪೂರ್ಣ ; 100% ಆಗಲು ಒತ್ತು!

ಸರ್ಕಾರವನ್ನು ಮತ್ತೊಂದು ಲಾಕ್​ಡೌನ್ ಹೇರುವಂತೆ ಮಾಡಬೇಡಿ. ದಯವಿಟ್ಟು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಎಂದು ಸಾರ್ವಜನಿಕರಲ್ಲಿ ಕಿಶೋರಿ ಪಡ್ನೇಕರ್ ಮನವಿ ಮಾಡಿಕೊಂಡಿದ್ದಾರೆ.

ಕೆಲವು ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಬೈಕುಲದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್​ಗೆ ಪ್ರಯಾಣಿಸಿ, ಪ್ರಯಾಣಿಕರಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಇದಾದ ನಂತರ ಸೇತುವೆಗಳ ಮೇಲೆಯೂ ಸಂಚಾರ ಮಾಡಿ, ಪಾನ್ ಶಾಪ್​ಗಳ ಬಳಿ, ರಸ್ತೆ ಬದಿಯ ವ್ಯಾಪಾರಿಗಳ ಜೊತೆ ಮಾತನಾಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ರಾಜ್ಯದಲ್ಲಿ ಕೊರೊನಾ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು.

ABOUT THE AUTHOR

...view details