ಮುಂಬೈ:ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮುಂಬೈ ಅಪರಾಧ ವಿಭಾಗದ ಪೊಲೀಸರ ಜಂಟಿ ತಂಡವು ಮುಂಬೈ ನಗರದ ಜೋಗೇಶ್ವರಿ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಝಾಕೀರ್ ಬಂಧಿತ ಶಂಕಿತ ಉಗ್ರ ಎಂದು ಮಹಾರಾಷ್ಟ್ರ ಎಟಿಎಸ್ ಮಾಹಿತಿ ನೀಡಿದೆ. ಭಯೋತ್ಪಾದಕ ಜಾನ್ ಮೊಹಮದ್ ಅಲಿಯಾಸ್ ಸಮೀರ್ ಕಾಲಿಯಾ ಮುಂಬೈಗೆ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ತರಬೇಕೆಂದು ಸೂಚನೆ ನೀಡಿದ್ದನು ಎಂದು ಆರೋಪಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮೀರ್ ಕಾಲಿಯಾನನ್ನು ಈಗಾಗಲೇ ದೆಹಲಿ ಪೊಲೀಸರು ಬಂಧಿಸಿದ್ದು, ಈ ಮೂಲಕ ನಿಖರ ಮಾಹಿತಿ ಆಧಾರದ ಮೇಲೆ ಮುಂಬೈನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸಮೀರ್ ಕಾಲಿಯಾ ಝಾಕೀರ್ ಬಗ್ಗೆ ಮಾಹಿತಿ ನೀಡಿದ್ದನು.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದಿಗೆ ಇವರು ಸಂಪರ್ಕದಲ್ಲಿದ್ದರು. ಈಗಾಗಲೇ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನೂ ದೆಹಲಿ ಪೊಲೀಸರ ವಿಶೇಷ ಸೆಲ್ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದು, ಅನೇಕ ಮಾಹಿತಿಗಳು ಹೊರಬಿದ್ದಿವೆ.
ಇದನ್ನೂ ಓದಿ:ಪಂಜಾಬ್ನ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ನ ಮೂವರ ಬಂಧನ