ಕರ್ನಾಟಕ

karnataka

ETV Bharat / bharat

Covid​ ನಿಯಮ ಉಲ್ಲಂಘನೆ: ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ FIR

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಪಂಕಜಾ ಮುಂಡೆ ಅವರ ಸಹೋದರಿ ಪ್ರೀತಮ್ ಮುಂಡೆ ಅವರಿಗೆ ಸ್ಥಾನ ಸಿಗದಿದ್ದಕ್ಕೆ ಕೇಂದ್ರ ಮುಂಬೈನ ವರ್ಲಿಯಲ್ಲಿರುವ ಕಚೇರಿಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರು, ಕೋವಿಡ್​ ನಿಯಮ ಉಲ್ಲಂಘಸಿ ರ‍್ಯಾಲಿ ನಡೆಸಿದ್ದರು. ಹೀಗಾಗಿ, ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Pankaja Munde
ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ ಎಫ್​ಐಆರ್

By

Published : Jul 15, 2021, 12:48 PM IST

ಮುಂಬೈ (ಮಹಾರಾಷ್ಟ್ರ):ಕೋವಿಡ್​ ನಿಯಮ ಉಲ್ಲಂಘಸಿ ರ‍್ಯಾಲಿ ನಡೆಸಿದ್ದಕ್ಕಾಗಿ ಬಿಜೆಪಿ ಮುಖಂಡೆ ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಪಂಕಜಾ ಮುಂಡೆ ಅವರ ಸಹೋದರಿ ಸ್ಥಳೀಯ ಸಂಸದೆ ಪ್ರೀತಮ್ ಮುಂಡೆ ಅವರಿಗೆ ಸ್ಥಾನ ಸಿಗದಿದ್ದಕ್ಕೆ ಸೆಂಟ್ರಲ್ ಮುಂಬೈನ ವರ್ಲಿಯಲ್ಲಿರುವ ಕಚೇರಿಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರು, ಕೋವಿಡ್​ ನಿಯಮ ಉಲ್ಲಂಘಸಿ ರ‍್ಯಾಲಿ ನಡೆಸಿದ್ದರು. ಹೀಗಾಗಿ, ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು 269ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪಂಕಜಾ ಮುಂಡೆಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕೇಲ್ ತಿಳಿಸಿದ್ದಾರೆ.

ಪಕ್ಷದ ನಿರ್ಧಾರಕ್ಕೆ ಯಾವುದೇ ಆಕ್ಷೇಪವಿಲ್ಲ:

ಇತ್ತೀಚಿನ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಪಂಕಜಾ ಮುಂಡೆ ಅವರ ಸಹೋದರಿ ಸ್ಥಳೀಯ ಸಂಸದೆ ಪ್ರೀತಮ್ ಮುಂಡೆ ಅವರಿಗೆ ಸ್ಥಾನ ಸಿಗಲಿಲ್ಲ. ಹೀಗಾಗಿ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಿಜೆಪಿಯ ಹಲವಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ವಿಸ್ತೃತ ಮಂತ್ರಿ ಮಂಡಲದಲ್ಲಾದರೂ ಪ್ರೀತಮ್ ಮುಂಡೆಗೆ ಸ್ಥಾನ ಸಿಗಬಹುದೆಂದು ಬಿಜೆಪಿಯ ಸಾವಿರಾರು ಕಾರ್ಯಕರ್ತ ಭಾವಿಸಿದ್ದರು.

ಅಂತಿಮ ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ. ಕೇಂದ್ರ ಸಂಪುಟದಲ್ಲಿ ತಮ್ಮ ಸ್ಥಾನ ಸಿಗದಿದ್ದಕ್ಕೆ ಮುಂಡೆ ಸಹೋದರಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂಬ ಊಹಪೋಹಗಳಿದ್ದವು. ಈ ಬಗ್ಗೆ ಸ್ಪಷ್ಟಪಡಿಸಿದ ಪಂಕಜಾ ಮುಂಡೆ, ಈ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷದ ನಿರ್ಧಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.

ಪಂಕಜಾ ಮುಂಡೆ ಅವರ ರಾಜಕೀಯ ಜೀವನವನ್ನು ಮುಗಿಸುವ ಉದ್ದೇಶದಿಂದ ಗೋಪಿನಾಥ್ ಮುಂಡೆ ಅವರ ಪುತ್ರಿ ಪ್ರೀತಂ ಮುಂಡೆ ಅವರ ಬದಲು ಬಿಜೆಪಿಯ ರಾಜ್ಯಸಭಾ ಸಂಸದ ಭಾಗವತ್ ಕರದ್ ಅವರನ್ನು ಮೋದಿಯವರ 2.0 ಕ್ಯಾಬಿನೆಟ್​ ಸೇರಿಸಿಕೊಳ್ಳಲಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಪಂಕಜಾ ಮುಂಡೆ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಈತ ಆಧುನಿಕ ಕುಂಭಕರ್ಣ: ವರ್ಷದಲ್ಲಿ 300 ದಿನ ಮಲಗೇ ಇರ್ತಾನೆ..!

ABOUT THE AUTHOR

...view details