ಮುಂಬೈ: ಯುಪಿಎಸ್‌ಸಿ ಪಠ್ಯಕ್ರಮದಲ್ಲಿ ತಪ್ಪುದಾರಿಗೆಳೆಯುವ ಮಾಹಿತಿ ಹಾಕಿದ್ದಾರೆ ಎಂದು ಆರೋಪಿಸಿ ಪ್ರಮುಖ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ (BYJU) ಬಿವೈಜೆಯು ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.
ಯುಪಿಎಸ್ಸಿ ಪಠ್ಯಕ್ರಮ ಬಗ್ಗೆ ತಪ್ಪು ಮಾಹಿತಿ: BYJU ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲು
ಕ್ರಿಮಿಯೋಫೋಬಿಯಾ ಹೆಸರಿನ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಮುಖ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ (BYJU) ಬಿವೈಜೆಯು ಮಾಲೀಕ ರವೀಂದ್ರನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕ್ರಿಮಿಯೋಫೋಬಿಯಾ ಹೆಸರಿನ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದ ಮೇಲೆ, BYJU ಮಾಲೀಕ ರವೀಂದ್ರನ್ ವಿರುದ್ಧ ದಂಡ ಸಂಹಿತೆ ಸೆಕ್ಷನ್ 120 (ಬಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 (ಎ) ಅಡಿಯಲ್ಲಿ ಆರೆ ಕಾಲೋನಿ ಪೊಲೀಸ್ ಠಾಣೆಯಲ್ಲಿ ಜುಲೈ 30 ರಂದು ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಎಡಿ-ಟೆಕ್ ಕಂಪನಿಯು ತನ್ನ ಯುಪಿಎಸ್ಸಿ ಪಠ್ಯಕ್ರಮದಲ್ಲಿ, ಕೇಂದ್ರೀಯ ತನಿಖಾ ದಳವು (ಸಿಬಿಐ) ಅಂತಾರಾಷ್ಟ್ರೀಯ ಸಂಘಟಿತ ಅಪರಾಧ (ಯುಎನ್‌ಟಿಒಸಿ) ವಿರುದ್ಧದ ವಿಶ್ವಸಂಸ್ಥೆಯ ಕನ್ವೆನ್ಷನ್‌ನ ನೋಡಲ್ ಏಜೆನ್ಸಿಯಾಗಿದೆ ಎಂದು ಉಲ್ಲೇಖಿಸಿದೆ ಎಂದು ಆರೋಪಿಸಿದೆ. ಆದರೆ, ಸಿಬಿಐ ಯುಎನ್ಟಿಒಸಿಗೆ ನೋಡಲ್ ಏಜೆನ್ಸಿ ಅಲ್ಲ ಎಂದು ಲಿಖಿತವಾಗಿ ನೀಡಿದೆ ಎಂದು ದೂರುದಾರರು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.