ಮುಂಬೈ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ನಡೆಸಿ 58 ಕೋಟಿ ರೂ. ಮೌಲ್ಯದ 146 ಕೆ.ಜಿ ಗಾಂಜಾ ವಶಪಡಿಸಿಕೊಳ್ಳುವ ಜೊತೆಗೆ 13 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಡ್ರಗ್ಸ್ ಪ್ರಕರಣ: 13 ಜನರನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್ - Maharashtra ATS
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ನಡೆಸಿ 146 ಕೆ.ಜಿ ಮಾದಕ ವಸ್ತುವನ್ನು ವಶಪಡಿಸಿಕೊಂಡು, 13 ಜನರನ್ನು ಬಂಧಿಸಿದೆ.
ಅಬ್ದುಲ್ ರಝಾಕ್ ಖಾದರ್ ಶೇಕ್, ಜಿತೇಂದ್ರ ಶರದ್ ಪವಾರ್, ನರೇಶ್ ಮದನ್ ಮಸ್ಕರ್, ಸರ್ದಾರ್ ಉತ್ತಮ್ ಪಾಟೀಲ್, ಜುಬೈರ್ ಲಾಲ್ ಮೊಹಮ್ಮದ್, ಮೊಹಮ್ಮದ್ ಸಲೀಂ ಅಬ್ದುಲ್ ಹಮೀದ್, ಸುರೇಶ್ ಸಿದ್ದಿಕಿ, ವಾಸಿಮ್ ಅಬ್ದುಲ್ ಲತೀಫ್ ಶೇಖ್, ಅವೇಶ್ ಅಕ್ಬರ್ ಖಾನ್, ಮೊಹಮ್ಮದ್ ತನ್ವೀರ್ ಅಬ್ದುಲ್ , ಮೊಹಮ್ಮದ್ ವಾಸಿಮ್ ಅಬ್ದುಲ್ ಲತೀಫ್ ಶೇಖ್, ಮುಸ್ತಫಾ ಜುಲ್ಫಿಕರ್ ಚರಣಿಯಾ ಮತ್ತು ಮೊಹಮ್ಮದ್ ಅಬ್ದುಲ್ ಬಂಧಿತ ಆರೋಪಿಗಳು.
ಇನ್ನು ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಹಣ ಮತ್ತು ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಕುರಿತು ಮುಂಬೈ ಭಯೋತ್ಪಾದನಾ ನಿಗ್ರಹ ದಳವು ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ.