ಮುಂಬೈ (ಮಹಾರಾಷ್ಟ್ರ):ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಕಾರ್ಯಾಚರಣೆ ನಡೆಸಿ 125 ಕೋಟಿ ರೂ ಮೌಲ್ಯದ 25 ಕೆ.ಜಿ ಹೆರಾಯಿನ್ ಅನ್ನು ಮುಂಬೈನ ನವಶೆವಾ ಬಂದರಿನಲ್ಲಿ ವಶಪಡಿಸಿಕೊಂಡಿದೆ.
ಮುಂಬೈ ನವಶೆವಾ ಬಂದರಿನಲ್ಲಿ 125 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ - ಮುಂಬೈನ ನ್ಹಾ ಶೆವಾ
ಮುಂಬೈನ ನವಶೆವಾ ಬಂದರಿನಲ್ಲಿ ಅಂದಾಜು 125 ಕೋಟಿ ರೂ.ಮೌಲ್ಯದ ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ವಶಪಡಿಸಿಕೊಂಡಿದೆ.
ಹೆರಾಯಿನ್
ಡಿಆರ್‌ಐ ನೀಡಿದ ಮಾಹಿತಿ ಪ್ರಕಾರ, ಕಂಟೇನರ್‌ನಲ್ಲಿ 125 ಕೋಟಿ ಮೌಲ್ಯದ 25 ಕೆಜಿ ಹೆರಾಯಿನ್ ಸಾಗಿಸಲಾಗುತ್ತಿತ್ತು. ಈ ಬಗ್ಗೆ ನಿಖರ ಮಾಹಿತಿ ಮೇರೆಗೆ ಬಂದರಿನಲ್ಲಿ ದಾಳಿ ನಡೆಸಿದ್ದು, ಮಾದಕವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿ ಅಕ್ಟೋಬರ್ 11 ರವರೆಗೆ ಕಸ್ಟಡಿಗೆ ಪಡೆಯಲಾಗಿದೆ.
ಕಳೆದ ಸೆಪ್ಟೆಂಬರ್ 22 ರಂದು ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ದಾಳಿ ನಡೆಸಿದ್ದು, 21,000 ಕೋಟಿ ರೂ. ಮೌಲ್ಯದ 3,000 ಕೆ.ಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿತ್ತು.