ಕರ್ನಾಟಕ

karnataka

ETV Bharat / bharat

ಆ್ಯಂಟಿಲಿಯಾ ಪ್ರಕರಣ: ಸಚಿನ್ ವಾಜೆ ಎನ್​ಐಎ ಕಸ್ಟಡಿ ವಿಸ್ತರಣೆ - ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್​ ಸಿಂಗ್

ಮನ್ಸುಖ್ ಹಿರೇನ್ ಸಾವು ಮತ್ತು ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಚಿನ್ ವಾಜೆಗೆ ಎನ್​ಐಎ ಕಸ್ಟಡಿ ವಿಸ್ತರಣೆಯಾಗಿದೆ.

Mumbai court extends Sachin Vaze's NIA custody till April 7
ಆ್ಯಂಟಿಲಿಯಾ ಪ್ರಕರಣ: ಸಚಿನ್ ವಾಜೆ ಎನ್​ಐಎ ಕಸ್ಟಡಿ ವಿಸ್ತರಣೆ

By

Published : Apr 3, 2021, 8:20 PM IST

ಮುಂಬೈ : ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಇರಿಸಿದ್ದ ಆರೋಪದಲ್ಲಿ ಅಮಾನತುಗೊಂಡು ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯ ಎನ್​ಐಎ ಕಸ್ಟಡಿಯನ್ನು ವಿಶೇಷ ಎನ್​ಐಎ ಕೋರ್ಟ್ ಏಪ್ರಿಲ್ 7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಎಸ್​​ಯುವಿ ಕಾರಿನಲ್ಲಿ ಸ್ಫೋಟಕ ಇರಿಸಿದ್ದ ಆರೋಪದ ಜೊತೆಗೆ ಉದ್ಯಮಿ ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣ ಕೂಡಾ ಥಳಕು ಹಾಕಿಕೊಂಡಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ:ಹರಿದ್ವಾರ ಕುಂಭಮೇಳ ಸಂಭ್ರಮಕ್ಕೆ ಕೋವಿಡ್ ಅಡ್ಡಿ: ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಸಚಿನ್ ವಾಜೆ ಮಾರ್ಚ್​​​ 13ರಂದು ಬಂಧಿತನಾಗಿದ್ದು, ಹೆಚ್ಚಿನ ವಿಚಾರಣೆಗೆ ಕೋರ್ಟ್​ಗೆ ಎನ್ಐಎ ಕೋರ್ಟ್​ಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಕೋರ್ಟ್ ಏಪ್ರಿಲ್ 7ರವರೆಗೆ ಆರೋಪಿಯನ್ನು ಎನ್​ಐಎ ಕಸ್ಟಡಿಗೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್​), ಲ್ಯಾಪ್​ಟಾಪ್ ಅನ್ನು ವಶಕ್ಕೆ ಪಡೆಯಾಗಿದ್ದು, ಪರಿಶೀಲನೆ ನಡೆಸಬೇಕಿದೆ ಎಂದು ಎನ್​ಐಎ ಪರ ವಕೀಲ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್​ ಸಿಂಗ್ ಕೋರ್ಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ABOUT THE AUTHOR

...view details