ಕರ್ನಾಟಕ

karnataka

ETV Bharat / bharat

ಆರ್ಯನ್​ ಖಾನ್​ಗೆ ಜೈಲೇ ಗತಿ.. ಅ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ - Mumbai court extends judicial custody

ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಮುಂಬೈ ವಿಶೇಷ ಎನ್​​ಡಿಪಿಎಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

Aryan Khan
Aryan Khan

By

Published : Oct 21, 2021, 6:29 PM IST

ಮುಂಬೈ:ಬಾಲಿವುಡ್​​ ಡ್ರಗ್ಸ್​ ಪ್ರಕರಣದಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್​ ಪುತ್ರನಿಗೆ ವಿಶೇಷ​ ಎನ್​ಡಿಪಿಎಸ್​​ ಕೋರ್ಟ್​ ಅಕ್ಟೋಬರ್​ 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದೆ. ಹೀಗಾಗಿ ಬಾಲಿವುಡ್ ನಟನ ಪುತ್ರ ಮತ್ತಷ್ಟು ದಿನ ಜೈಲಿನಲ್ಲೇ ಕಳೆಯುವಂತಾಗಿದೆ.

ಡ್ರಗ್ಸ್​ ಪ್ರಕರಣದಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್​​​ ಮತ್ತು ಇತರ ಮೂವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಎನ್​​ಡಿಪಿಎಸ್ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

ಅಕ್ಟೋಬರ್​ 7ರಂದು ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್​ಗೆ ಈ ಹಿಂದೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ, ಕೋರ್ಟ್​ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಅಕ್ಟೋಬರ್​ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಇದನ್ನೂ ಓದಿರಿ:ಆರ್ಯನ್ ಬಾಲ್ಯದ ಗೆಳತಿ ಅನನ್ಯಾ.. ವಿದೇಶಗಳಲ್ಲಿ ಮೋಜು - ಮಸ್ತಿ, ಹತ್ತಾರು ಪಾರ್ಟಿಗಳಲ್ಲಿ ಕಾಣಿಸಿಕೊಂಡಿತ್ತು ಈ ಜೋಡಿ!

ಮುಂಬೈನ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯದಿಂದ ನಿನ್ನೆ ಮಹತ್ವದ ತೀರ್ಪು ಹೊರಬಿದ್ದಿದ್ದು, ಆರ್ಯನ್​ ಖಾನ್​ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ವೇಳೆ, ನಟಿ ಅನನ್ಯಾ ಜೊತೆ ಡ್ರಗ್ಸ್​ ವಿಚಾರವಾಗಿ ಚಾಟ್​​ ನಡೆದಿರುವ ಮಾಹಿತಿ ಕೂಡ ಬಹಿರಂಗಗೊಂಡಿತ್ತು. ಇದೀಗ ಜಾಮೀನು ವಿಚಾರವಾಗಿ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅಕ್ಟೋಬರ್​ 26ಕ್ಕೆ ವಿಚಾರಣೆ ನಡೆಯಲಿದೆ.

ABOUT THE AUTHOR

...view details