ಕರ್ನಾಟಕ

karnataka

By

Published : Apr 14, 2021, 7:05 PM IST

Updated : Apr 14, 2021, 8:42 PM IST

ETV Bharat / bharat

ಹನಿಮೂನ್​ಗೆ ತೆರಳಿದ್ದವರು ಕತಾರ್​​ನಲ್ಲಿ ಅರೆಸ್ಟ್​​​​​​.. 2 ವರ್ಷದ ನಂತ್ರ ಮುಂಬೈಗೆ ಬಂದ ಜೋಡಿ!

ಕತಾರ್​ಗೆ ಹನಿಮೂನ್​ಗೆ ತೆರಳಿದ್ದ ಜೋಡಿಗೆ ಡ್ರಗ್ಸ್​ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಇದೀಗ ಪ್ರಕರಣದಿಂದ ಆರೋಪ ಮುಕ್ತರಾಗಿರುವ ಜೋಡಿ ಭಾರತಕ್ಕೆ ವಾಪಸ್​​ ಆಗಿದೆ.

Mumbai couple
Mumbai couple

ನವದೆಹಲಿ:ಡ್ರಗ್ಸ್​​​ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಮುಂಬೈ ಮೂಲದ ದಂಪತಿ ಇದೀಗ ಭಾರತಕ್ಕೆ ವಾಪಸ್​ ಆಗಿದ್ದಾರೆ. ಮಾದಕ ದ್ರವ್ಯ ಆರೋಪದ ಮೇಲೆ ಈ ದಂಪತಿಗಳ ಬಂಧನ ಮಾಡಲಾಗಿತ್ತು.

ಈ ದಂಪತಿಗೆ ಭಾರಿ ದಂಡ ಹಾಗೂ 10 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದರೆ, ಎಲ್ಲ ಆರೋಪಗಳಿಂದ ಇವರು ಮುಕ್ತರಾಗಿದ್ದರು. 2019ರ ಜುಲೈ 6ರಂದು ಮೊಹಮ್ಮದ್​ ಶಾರಿಕ್​ ಖುರೇಷಿ ಮತ್ತು ಪತ್ನಿ ಒನಿಕಾ ಕೌಸರ್​ ಹನಿಮೂನ್​​ಗಾಗಿ ಕತಾರ್​ಗೆ ತೆರಳಿದ್ದರು ಎಂದು ಎನ್​ಸಿಬಿಯ ವಲಯ ನಿರ್ದೇಶಕ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಹನಿಮೂನ್​ಗೆ ತೆರಳಿದ್ದವರು ಕತಾರ್​​ನಲ್ಲಿ ಅರೆಸ್ಟ್

ದೋಹಾದ್​ ಹಮದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಿದ್ದಂತೆ ಇವರನ್ನ ಡ್ರಗ್ಸ್​​ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಇವರ ಬ್ಯಾಗ್​ನಿಂದ 4.1 ಕಿಲೋ ಗ್ರಾಂನಷ್ಟು ಹಶಿಶ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ವಿಚಾರಣೆ ನಡೆಸಿ ದಂಪತಿಗೆ ಅಲ್ಲಿನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ಕತಾರಿ ರಿಯಾಲ್​ ದಂಡ ವಿಧಿಸಿತ್ತು.

ಇದನ್ನೂ ಓದಿ: ಮಗಳ ಶಿಕ್ಷಣಕ್ಕಾಗಿ 'ಕಿಡ್ನಿ ಮಾರಾಟ'ಕ್ಕೆ ಅನುಮತಿ ನೀಡಿ: ಜಿಲ್ಲಾಧಿಕಾರಿಗೆ ಪತ್ರ ಬರೆದ ದಂಪತಿ!

ಸೆಪ್ಟೆಂಬರ್​ 27ರಂದು ಒನಿಕಾ ಕೌಸರ್​ ತಂದೆ ಶಕೀಲ್​ ಅಹ್ಮದ್​ ಖುರೇಷಿ ತಮ್ಮ ಮಗಳು ಹಾಗೂ ಸೊಸೆಯನ್ನ ಕತಾರ್​​ನಲ್ಲಿ ಬಂಧಿಸಿದ್ದಾರೆಂದು ಆರೋಪಿಸಿ, ಎನ್​ಸಿಬಿಗೆ ದೂರು ನೀಡಿದ್ದರು. ಇವರು ಹನಿಮೂನ್​ಗೆ ತೆರಳಿದ್ದಾರೆಂದು ಮಾಹಿತಿ ನೀಡಿದ್ದರು. ಇದರ ಕಾರ್ಯಾಚರಣೆ ನಡೆಸಿದ ಎನ್​ಸಿಬಿ, ವಿದೇಶಾಂಗ ಸಚಿವಾಲಯಕ್ಕೆ ಸಂಪರ್ಕಿಸಿ ಮಾಹಿತಿ ನೀಡಿತ್ತು. ಇನ್ನು ವಿದೇಶಾಂಗ ಸಚಿವಾಲಯ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ, ಪ್ರಕರಣ ಇತ್ಯರ್ಥಗೊಳಿಸಿದ್ದು, ಅವರು ಆರೋಪ ಮುಕ್ತರಾಗಿದ್ದಾರೆ. ಪ್ರಸ್ತುತ ದಂಪತಿ ಅಲ್ಲಿಂದ ಮುಂಬೈಗೆ ವಾಪಸ್​ ಆಗಿದ್ದಾರೆ.

Last Updated : Apr 14, 2021, 8:42 PM IST

ABOUT THE AUTHOR

...view details