ಕರ್ನಾಟಕ

karnataka

ETV Bharat / bharat

ಅವ್ಯವಹಾರ ಪ್ರಕರಣ; ಮುಂಬೈನಲ್ಲಿ ಚಾಂಡಿವಾಲ್‌ ಆಯೋಗದ ವಿಚಾರಣೆಗೆ ಅನಿಲ್‌ ದೇಶ್‌ಮುಖ್‌, ಸಚಿನ್‌ ವಾಜೆ ಹಾಜರು - ಮಹಾರಾಷ್ಟ್ರದಲ್ಲಿ ಅವ್ಯವಹಾರ ಪ್ರಕರಣ

Sachin Waze: ಅವ್ಯವಹಾರದ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಇಂದು ಮುಂಬೈನಲ್ಲಿರುವ ಚಾಂಡಿವಾಲ್‌ ಆಯೋಗದ ಮುಂದೆ ಹಾಜರಾಗಿದ್ದಾರೆ. ಪೊಲೀಸ್‌ ಮಾಜಿ ಅಧಿಕಾರಿ ಸಚಿನ್‌ ವಾಜೆ ಕೂಡ ಆಯೋಗದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

Mumbai: Anil Deshmukh, Sachin Waze appear before Chandiwal Commission
ಅವ್ಯವಹಾರ ಪ್ರಕರಣ; ಮುಂಬೈನಲ್ಲಿ ಚಾಂಡಿವಾಲ್‌ ಆಯೋಗದ ವಿಚಾರಣೆಗೆ ಅನಿಲ್‌ ದೇಶ್‌ಮುಖ್‌, ಸಚಿನ್‌ ವಾಝೆ ಹಾಜರು

By

Published : Dec 13, 2021, 6:08 PM IST

ಮುಂಬೈ (ಮಹಾರಾಷ್ಟ್ರ): ಅಧಿಕಾರದಲ್ಲಿದ್ದಾಗ ಅವ್ಯವಹಾರದ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಪೊಲೀಸ್‌ ಇಲಾಖೆಯಿಂದ ವಜಾಗೊಂಡಿರುವ ಮಾಜಿ ಅಧಿಕಾರಿ ಸಚಿನ್ ವಾಜೆ ಇಂದು ಚಾಂಡಿವಾಲ್ ಆಯೋಗದ ಮುಂದೆ ಹಾಜರಾಗಿದ್ದಾರೆ.

ದೇಶಮುಖ್ ಮತ್ತು ವಾಜೆ ಇಬ್ಬರೂ ಕ್ರಮವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ) ಯ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ. ಮುಂಬೈನ ಹೋಟೆಲ್‌ಗಳು ಹಾಗೂ ಬಾರ್‌ಗಳಿಂದ ಪ್ರತಿ ತಿಂಗಳು 100 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಬೇಕೆಂದು ವಜಾಗೊಂಡಿರುವ ಸಹಾಯಕ ಇನ್ಸ್‌ಪೆಕ್ಟರ್ ಸಚಿನ್ ವಾಜೆಗೆ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂದು ಪರಮ್‌ ಬೀರ್‌ ಸಿಂಗ್ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ:ಗೋವುಗಳ ಹರಣ ಆರೋಪ.. ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಪ್ರಿಯಾಂಕಾ ಗಾಂಧಿ ಗುಡುಗು

ABOUT THE AUTHOR

...view details