ಕರ್ನಾಟಕ

karnataka

ETV Bharat / bharat

ಬಹು-ಏಜೆನ್ಸಿ ಸಮರಾಭ್ಯಾಸ 'ಸಾಗರ ಶಕ್ತಿ' ಮುಕ್ತಾಯ - creek sector of Kutch peninsula in Gujarat

ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್, ಗಡಿ ಭದ್ರತಾ ಪಡೆ ಕಚ್ ಪರ್ಯಾಯ ದ್ವೀಪದ ಕ್ರೀಕ್ ಸೆಕ್ಟರ್‌ನಲ್ಲಿ ನಡೆದ ಅಭ್ಯಾಸದಲ್ಲಿ ಭಗವಹಿಸಿದ್ದವು

Multi-agency exercise 'Sagar Shakti' ends in Gujarat
Multi-agency exercise 'Sagar Shakti' ends in Gujarat

By

Published : Nov 23, 2021, 3:18 AM IST

ಅಹಮದಾಬಾದ್: ಸಶಸ್ತ್ರ ಪಡೆಗಳು ಮತ್ತು ಇತರ ಭದ್ರತಾ ಸಂಸ್ಥೆಗಳ ನಾಲ್ಕು ದಿನಗಳ ಬಹು-ಏಜೆನ್ಸಿ(multi-agency exercise) ಸಮರಾಭ್ಯಾಸ ಮುಕ್ತಾಯಗೊಂಡಿದೆ.

ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್, ಗಡಿ ಭದ್ರತಾ ಪಡೆ ಗುಜರಾತ್‌ನ ಕಚ್ ಪರ್ಯಾಯ ದ್ವೀಪದ ಕ್ರೀಕ್ ಸೆಕ್ಟರ್‌ನಲ್ಲಿ ( creek sector of Kutch peninsula in Gujarat ) ನಡೆದ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜಸ್ಥಾನ ಮತ್ತು ಗುಜರಾತ್‌ನ ತರಬೇತಿ ಪ್ರದೇಶಗಳಲ್ಲಿ ನಡೆಯುತ್ತಿರುವ 'ದಕ್ಷಿಣ ಶಕ್ತಿ'ವ್ಯಾಯಾಮದ ಭಾಗವಾಗಿ'ಸಾಗರ ಶಕ್ತಿ' (Sagar Shakti) ಎಂಬ ಬಹು-ಏಜೆನ್ಸಿ ಕುಶಲತೆಯನ್ನು ನವೆಂಬರ್ 19 ಮತ್ತು 22 ರ ನಡುವೆ ಆಯೋಜಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ. ಸಾಗರ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಸೇರಿದಂತೆ ಗುಜರಾತ್ ಏಜೆನ್ಸಿಗಳು ಈ ವ್ಯಾಯಾಮದಲ್ಲಿ ಭಾಗವಹಿಸಿದ್ದವು.

ಈ ಸಮರಾಬ್ಯಾಸದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿರುವ ಸಮಗ್ರ ಸಮನ್ವಯವನ್ನು ಅಭ್ಯಾಸ ಮಾಡಿದರು. ಪ್ರತಿಕ್ರಿಯೆ ಕಾರ್ಯವಿಧಾನ, ನೈಜ ಸಮಯದ ಸಂವಹನ ಮತ್ತು ಉದಯೋನ್ಮುಖ ಬಹು ಆಯಾಮದ ಬೆದರಿಕೆಗಳನ್ನು ಜಯಿಸಲು ಕಾರ್ಯಾಚರಣೆಯ ಡೇಟಾವನ್ನು ಹಂಚಿಕೊಳ್ಳುವುದು ಸೇರಿದಂತೆ ಇತರೆ ಅಭ್ಯಾಸಗಳನ್ನು ಮಾಡಲಾಗಿದೆ.

ABOUT THE AUTHOR

...view details