ಕರ್ನಾಟಕ

karnataka

ETV Bharat / bharat

ಜೀವನದ ಅಂತಿಮ ಕುಸ್ತಿಯಲ್ಲಿ ಸೋತ ನೇತಾಜಿ.. ಮುಲಾಯಂ ಸಿಂಗ್​ ಇನ್ನಿಲ್ಲ... - ಮುಲಾಯಂಸಿಂಗ್​ ಯಾದವ್

ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರು ಇಂದು ವಿಧಿವಶರಾದರು.

ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್

By

Published : Oct 10, 2022, 10:44 AM IST

Updated : Oct 10, 2022, 10:58 AM IST

ಹೈದರಾಬಾದ್:ಅನಿವಾರ್ಯ ಎಂಬುದು ಸ್ಪಷ್ಟವಾಗಿತ್ತು. ಆದರೆ, ಬಹುಶಃ ಯಾರೂ ನಂಬಲು ಸಿದ್ಧರಿರಲಿಲ್ಲ. ಆದ್ರೆ ಕಾಂಗ್ರೆಸ್ ಪರಂಪರೆಗೆ ಸವಾಲೆಸೆದು ಸಮಾನಾಂತರ ಪ್ರಜಾಸತ್ತಾತ್ಮಕ ವೇದಿಕೆ ರಚಿಸುವಲ್ಲಿ ಮುಲಾಯಂಸಿಂಗ್​ ಯಾದವ್ ಯಶಸ್ವಿಯಾಗಿದ್ದರು. ಬಿಜೆಪಿಯ ಆಕ್ರಮಣಶೀಲತೆ ಮತ್ತು ಎಡಪಂಥೀಯ ಸಿದ್ಧಾಂತಗಳನ್ನು ಕುಶಲತೆಯಿಂದ ನಿರ್ವಹಿಸಿದ ಕೀರ್ತಿ ನೇತಾಜಿ ಅವರದ್ದು. ಇನ್ನೂ ವಿಶೇಷ ಅಂದ್ರೆ ಪ್ರಾದೇಶಿಕ ಧ್ವನಿಯನ್ನು ಎತ್ತಿ ಹಿಡಿದವರಲ್ಲಿ ಇವರು ಕೂಡ ಪ್ರಮುಖರು.

ಜಿಸ್ಕಾ ಜಲವಾ ಕಾಯಂ ಹೈ, ಉಸ್ಕಾ ನಾಮ್ ಮುಲಾಯಂ ಹೈ ಅಂದರೆ ಯಾರ ವರ್ಚಸ್ಸು ಯಾವಾಗಲೂ ಇರುತ್ತದೆಯೋ ಆ ಹೆಸರೇ ಮುಲಾಯಂ ಸಿಂಗ್. ಭಾರತದ ರಾಜಕೀಯ ಮಾಂತ್ರಿಕ ಎಂದು ಖ್ಯಾತಿ ಗಳಿಸಿರುವುದು ಮುಲಾಯಂ ಸಿಂಗ್ ಯಾದವ್ ಅವರ ಹಿರಿಮೆ. ಆದರೆ ಅವರು ಜೀವನದ ಕುಸ್ತಿಯಲ್ಲಿ ಈಗ ಸೋತಿದ್ದಾರೆ. ಯುದ್ಧವನ್ನು ಮುಗಿಸಿ ಬದುಕಿನ ಪಯಣವನ್ನು ಅಂತ್ಯಗೊಳಿಸಿದ್ದಾರೆ.

ನೇತಾಜಿ ಎಂದೇ ಕರೆಯಲ್ಪಡುವ ಮುಲಾಯಂ ಸಿಂಗ್ ಯಾದವ್ ಅವರು, ಉತ್ತರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಹೆಸರು ಮಾಡಿದ್ದಾರೆ. ಸಾಹಿತ್ಯಿಕ ಪರಿಭಾಷೆಯಲ್ಲಿ ಅವರೊಬ್ಬ ಕುಸ್ತಿಪಟು. ಆ ಕ್ರೀಡೆಯಲ್ಲಿನ ಅವರ ಆಸಕ್ತಿ ತುಸು ಹೆಚ್ಚೇ ಇತ್ತು ಎನ್ನಬಹುದು.

ಭಾರತದ ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿದ ಮಹಾಮಹಿಮ: 1992 ರಲ್ಲಿ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದಾಗ ಪ್ರಾದೇಶಿಕ ಪಕ್ಷಗಳನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ರಾಷ್ಟ್ರೀಯ ನಿಯತಾಂಕಗಳ ಮೇಲೆ ತಮ್ಮದೇ ಆದ ನಿರೂಪಣೆಗಳನ್ನು ಹೊಂದಬಹುದು ಎಂಬುದನ್ನು ತೋರಿಸಿಕೊಟ್ಟವರು ಇದೇ ನೇತಾಜಿ. ಇವರೇನು ಮಾಡಿ ಯಾರು ಎಂಬ ಮಾತಿಗೆ ಸೆಡ್ಡು ಹೊಡೆದು, ಕೇವಲ ನಾಲ್ಕು ವರ್ಷಗಳಲ್ಲಿ ಮುಲಾಯಂ ಸಿಂಗ್​ ಪ್ರಾದೇಶಿಕ ಪಕ್ಷಗಳ ತಾಕತ್ತು ಎಂತಹದ್ದನ್ನು ತೋರಿಸಿಕೊಟ್ಟು ಸೈ ಎನಿಸಿಕೊಂಡರು.

ಸಮಾಜವಾದಿ ಪಕ್ಷ ಸ್ಪಷ್ಟವಾಗಿ ಕಾಂಗ್ರೆಸ್ ಮತ್ತು ಎಡರಂಗಗಳ ನಡುವೆ ಸಮತೋಲನವನ್ನು ತಂದಿಟ್ಟರು. ಆ ಮೂಲಕ ಜಾತ್ಯತೀತ ತೃತೀಯ ರಂಗವನ್ನು ವಿನ್ಯಾಸಗೊಳಿಸಿದರು. ಅಲ್ಲಿ ಸಣ್ಣ ಪ್ರಾದೇಶಿಕ ಪಕ್ಷಗಳು ತಮ್ಮ ಧ್ವನಿಯನ್ನು ನೋಂದಾಯಿಸಬಹುದು ಎಂಬುದನ್ನು ತೋರಿಸಿ, ಆ ಮೂಲಕ ರಾಷ್ಟ್ರೀಯ ಮಟ್ಟದ ಧ್ವನಿಯೂ ಆದರು.

ತೃತೀಯ ರಂಗದ ಮೊದಲ ಶಿಲ್ಪಿ: ಬಿಜೆಪಿ - ವಿರೋಧಿ ಹಾಗೂ ಕಾಂಗ್ರೆಸ್-ವಿರೋಧಿ ಶಕ್ತಿಗಳನ್ನು ಒಳಗೊಂಡ ತೃತೀಯ ರಂಗವನ್ನು ಕಟ್ಟುವ ಪ್ರಮುಖ ಶಿಲ್ಪಿಗಳಲ್ಲಿ ಮುಲಾಯಂ ಕೂಡಾ ಒಬ್ಬರು. 1996 ರಲ್ಲಿ ಈ ನೇತಾಜಿಯನ್ನು ಕಾಂಗ್ರೆಸ್​ ಕೆಟ್ಟದಾಗಿ ನಡೆಸಿಕೊಂಡಿತ್ತು. ಆದರೆ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯೆ ಅವರ ಬಳಿ ಇರಲಿಲ್ಲ. ಫಲಿತಾಂಶವು ಆಶ್ಚರ್ಯಕರವಾಗಿ ಬಂದಿತ್ತು. ಆಗ ಅವರು ಸರ್ಕಾರ ರಚಿಸುವಲ್ಲಿ ಸೋತರು.

1996 ಮತ್ತು 1998 ರ ನಡುವೆ ಹೆಚ್ ಡಿ ದೇವೇಗೌಡ ಅವರು ಅವರು ಪ್ರಧಾನಿ ಆದರು. ಅವರ 11 ತಿಂಗಳ ಪ್ರಧಾನಿ ಅವಧಿಯಲ್ಲಿ ಮುಲಾಯಂ ಸಿಂಗ್​ ಯಾದವ್​ ಮಹತ್ವದ ಪಾತ್ರ ನಿರ್ವಹಿಸಿದರು. ಇನ್ನು ಕೆಲವೇ ತಿಂಗಳು ಆಡಳಿತ ನಡೆಸಿದ ಐ ಕೆ ಗುಜ್ರಾಲ್ ಸರ್ಕಾರದಲ್ಲೂ ಅವರು ಸಚಿವರಾಗಿದ್ದರು. ಈ ಮೂಲಕ ಅವರು ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಹೆಚ್ಚಿಸಿದ್ದರು. ತರಬೇತಿ ಪಡೆದ ಕುಸ್ತಿಪಟುವಾಗಿದ್ದ ಯಾದವ್, ಭಾರತೀಯ ರಾಜಕೀಯದಲ್ಲಿದ್ದ ಬಹುದೊಡ್ಡ ನಾಯಕರಾಗಿ ಬೆಳೆದರು.

ಕೇವಲ 15 ವರ್ಷ ವಯಸ್ಸಿನಲ್ಲೇ ಅವರು ಸಮಾಜವಾದವನ್ನು ಸ್ವೀಕರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದವರು. ಡಾ ರಾಮ್ ಮನೋಹರ್​ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದರು. ಮನೋಹರ್ ಲೋಹಿಯಾ ಕಾಲದ ಅತ್ಯಂತ ಎತ್ತರದ ಸಮಾಜವಾದಿ ನಾಯಕರಲ್ಲಿ ಮುಲಾಯಂ ಸಿಂಗ್​ ಅವರೂ ಒಬ್ಬರು. ಈ ಆಂದೋಲನದ ಸಮಯದಲ್ಲಿ ಅವರು 3 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು.

(ಓದಿ: ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್​ ನಿಧನ)

Last Updated : Oct 10, 2022, 10:58 AM IST

ABOUT THE AUTHOR

...view details