ನವದೆಹಲಿ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಹಿರಿಯ ಸಹೋದರ ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಖ್ತಾರ್ ಅನ್ಸಾರಿ ಪ್ರಾಣಕ್ಕೆ ಅಪಾಯವಿದೆ: ಸಹೋದರ ಅಫ್ಜಲ್ ಅನ್ಸಾರಿ - ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ
ಉತ್ತರ ಪ್ರದೇಶದಲ್ಲಿ ನನ್ನ ಕಿರಿಯ ಸಹೋದರ ಮುಖ್ತಾರ್ ಅನ್ಸಾರಿ ಪ್ರಾಣಕ್ಕೆ ಅಪಾಯವಿದೆ. ಜನರು ಅವನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನನ್ನ ಕಿರಿಯ ಸಹೋದರನ ಪ್ರಾಣಕ್ಕೆ ಅಪಾಯವಿದೆ. ಜನರು ಅವನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ನ್ಯಾಯಾಲಯ ಪರಿಗಣಿಸಬೇಕು ಎಂದು ಗಾಜಿಪುರ ಸಂಸದ ಹೇಳಿದ್ದಾರೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಖ್ತಾರ್ ಅನ್ಸಾರಿಯನ್ನು 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಜೈಲಿಗೆ ವರ್ಗಾವಣೆ ಮಾಡಬೇಕು ಎಂದು ರೈ ಪತ್ನಿ ಅಲ್ಕಾ ರೈ ಕಾನೂನು ಹೊರಾಟ ನಡೆಸಿದ್ದರು. ಹಾಗಾಗಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಜೈಲಿಗೆ ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಪಂಜಾಬ್ ಸರ್ಕಾರಕ್ಕೆ ಆದೇಶಿಸಿದೆ.