ನವದೆಹಲಿ :ಇಲ್ಲಿನಮುಖರ್ಜಿನಗರದಲ್ಲಿ ವಾಸಿಸುತ್ತಿರುವ ವಕೀಲ ದಂಪತಿ ಸಮಾಜದ ಬಡವರಿಗೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನೆರವು ನೀಡುತ್ತಿದ್ದಾರೆ. ದೆಹಲಿಯಲ್ಲಿ ಚಳಿ ಮತ್ತು ಮಾಲಿನ್ಯದಿಂದಾಗಿ ಬಡವರ ಸಮಸ್ಯೆಗಳು ಹೆಚ್ಚಿವೆ.
ಈ ಚಳಿಯ ವಾತಾವರಣದಲ್ಲಿ ಪಾದಚಾರಿ ಮಾರ್ಗದಲ್ಲಿ ವಾಸಿಸುವ ಜನರು ನಡುಗುವಂತಾಗಿದೆ. ಈ ಮಧ್ಯೆ ತಲೆಯ ಮೇಲೆ ಸೂರಿಲ್ಲದ ನಿರ್ಗತಿಕರಿಗೆ ಮತ್ತು ನಿರಾಶ್ರಿತರಿಗೆ ಈ ದಂಪತಿ ಕಂಬಳಿ ಮತ್ತು ಆಹಾರ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಭಿಕ್ಷುಕರಿಂದ ಹಿಡಿದು ರಿಕ್ಷಾ ಚಾಲಕರಿಗೂ ಸಹಾಯ ಹಸ್ತ ಚಾಚುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಈ ದಂಪತಿ, ಮನೆಯಲ್ಲಿ 20 ಲೀಟರ್ ಚಹಾವನ್ನು ತಯಾರಿಸುವ ಮೂಲಕ ಅವರ ದಿನಚರಿ ಪ್ರಾರಂಭವಾಗುತ್ತದೆ. ಬಡವರಿಗೆ ಉಪಹಾರದ ಜತೆಗೆ ಚಹಾವನ್ನು ವಿತರಿಸುತ್ತಾರೆ. ಜೊತೆಗೆ ಚಳಿಯಿಂದ ರಕ್ಷಿಸಲು ಹೊದಿಕೆಗಳು ಮತ್ತು ಕಂಬಳಿಗಳನ್ನು ನೀಡುತ್ತಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ