ಡೆಹ್ರಾಡೂನ್ (ಉತ್ತರಾಖಂಡ): ಖ್ಯಾತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬ ಸಮೇತವಾಗಿ ಗುರುವಾರ ಉತ್ತರಾಖಂಡನ ವಿಶ್ವವಿಖ್ಯಾತ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಎರಡೂ ಸುಕ್ಷೇತ್ರಗಳಿಗೆ ಅಂಬಾನಿ 5 ಕೋಟಿ ರೂಪಾಯಿ ದೇಣಿಗೆ ನೀಡಿದರು.
ಇಂದು ಬೆಳಗ್ಗೆ 7 ಗಂಟೆಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಮುಖೇಶ್ ಅಂಬಾನಿ ಹಾಗೂ ಕುಟುಂಸ್ಥರು ಬಂದಿಳಿದರು. ನಂತರ ಬದರಿನಾಥ ಧಾಮಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ನಂತರ ಕೇದಾರನಾಥ ಧಾಮಕ್ಕೂ ಅಂಬಾನಿ ಕುಟುಂಬ ಸಮೇತವಾಗಿ ಭೇಟಿ ನೀಡಿದರು.
ದೇವರ ದರ್ಶನದ ನಂತರ ಮುಕೇಶ್ ಅಂಬಾನಿ ಬದರಿನಾಥ ಧಾಮದ ರಾವಲ್ ಈಶ್ವರಿ ಪ್ರಸಾದ್ ನಂಬೂದರಿ ಅವರನ್ನು ಭೇಟಿಯಾದರು. ಈ ವೇಳೆ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕಿಶೋರ್ ಪನ್ವಾರ್ ಮಾತನಾಡಿ, ಮುಕೇಶ್ ಅಂಬಾನಿ ಅವರು ಭಗವಾನ್ ಬದ್ರಿ ವಿಶಾಲ್ ಮತ್ತು ಬಾಬಾ ಕೇದಾರ್ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ ಎಂದು ಹೇಳಿದರು.
ಆಗಾಗ್ಗೆ ಮುಖೇಶ್ ಅಂಬಾನಿ ಕುಟುಂಬದೊಂದಿಗೆ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಅಂಬಾನಿ ಕುಟುಂಬ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ದೇವರ ದರ್ಶನ ಪಡೆಯದೇ ಹಿಂತಿರುಗಬೇಕಾಗಿತ್ತು. ಹೀಗಾಗಿ ಗುರುವಾರ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಬದರಿನಾಥ್ ಮತ್ತು ಕೇದಾರನಾಥಕ್ಕೆ ಭೇಟಿ ನೀಡಿದೆ.
ಇದನ್ನೂ ಓದಿ:ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಧಾನಿ ಮೋದಿ