ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿ ಭವನದ ಮೊಘಲ್​ ಗಾರ್ಡ​ನ್​ ಇನ್ನು ಅಮೃತ್​ ಉದ್ಯಾನ್​!​

ರಾಷ್ಟ್ರಪತಿ ಭವನದಲ್ಲಿನ ಮೊಘಲ್​ ಗಾರ್ಡನ್​​ ಹೆಸರನ್ನು ಅಮೃತ್​ ಉದ್ಯಾನ್​​ ಎಂದು ಮರುನಾಮಕರಣ ಮಾಡಲಾಗಿದೆ. ಜನವರಿ 29ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಲಿದ್ದಾರೆ.

Etv mughal-gardens-at-rashtrapati-bhavan-will-now-be-known-as-amrit-udyan
ರಾಷ್ಟ್ರಪತಿ ಭವನದಲ್ಲಿನ ಮೊಘಲ್​ ಗಾರ್ಡ​ನ್​ ಇನ್ನು ಅಮೃತ್​ ಉದ್ಯಾನ್​​

By

Published : Jan 28, 2023, 11:08 PM IST

ನವದೆಹಲಿ : ಕೇಂದ್ರ ಸರ್ಕಾರವು ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್​ನ್ನು ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಿದೆ. 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವ ಹಿನ್ನೆಲೆ ಈ ಮೊಘಲ್​ ಗಾರ್ಡನ್​ನ್ನು ಅಮೃತ್​ ಉದ್ಯಾನ ಎಂದು ಹೆಸರಿಸಲಾಗಿದೆ ಎಂದು ಹೇಳಿದೆ.

ಮೊಘಲ್ ಗಾರ್ಡನ್ ಇನ್ನು ಅಮೃತ್​ ಉದ್ಯಾನ್​ :ಈ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಪತ್ರಿಕಾ ಕಾರ್ಯದರ್ಶಿ ನಾವಿಕಾ ಗುಪ್ತಾ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯದ 75 ವರ್ಷಗಳನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಈ ಉದ್ಯಾನಕ್ಕೆ ಅಮೃತ್ ಉದ್ಯಾನ ಎಂದು ಹೆಸರಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಗುಲಾಮಿತನದ ಮಾನಸಿಕತೆಯಿಂದ ಹೊರ ಬರುತ್ತಿದೆ- ಗಿರಿರಾಜ್​ ಸಿಂಗ್​ :ಈ ಅಮೃತ ಉದ್ಯಾನವು ಸುಮಾರು 15 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಇದು ಜಮ್ಮು ಮತ್ತು ಕಾಶ್ಮೀರದ ಮೊಘಲ್ ಉದ್ಯಾನಗಳು ಮತ್ತು ತಾಜ್ ಮಹಲ್ ಸುತ್ತಲಿನ ಉದ್ಯಾನಗಳು ಮತ್ತು ಭಾರತ ಮತ್ತು ಪರ್ಷಿಯಾದ ವರ್ಣಚಿತ್ರಗಳಿಂದ ಸ್ಫೂರ್ತಿಯನ್ನು ಪಡೆದುಕೊಂಡಿದೆ. ಇದನ್ನು ರಾಷ್ಟ್ರಪತಿ ಭವನದ ಆತ್ಮ ಎಂದು ಹೇಳಲಾಗುತ್ತದೆ. ಇನ್ನು ಮೊಘಲ್ ಗಾರ್ಡನ್​ನ್ನು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿರುವ ನಿರ್ಧಾರವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂದು ಹೇಳಿದ್ದಾರೆ. ಅಲ್ಲದೇ ಇದು ಭಾರತವು ಗುಲಾಮಿತನದ ಮಾನಸಿಕತೆಯಿಂದ ಹೊರಬರುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಚಿವ ಗಿರಿರಾಜ್ ಸಿಂಗ್​ ಹೇಳಿದ್ದಾರೆ.

ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ಸಾಧನೆ :ಇನ್ನು ರಾಷ್ಟ್ರಪತಿ ಭವನದ ಪ್ರಸಿದ್ಧ ಮೊಘಲ್ ಗಾರ್ಡನ್ಸ್ ನಲ್ಲಿ ಅಮೃತ್ ಉದ್ಯಾನ್ ಎಂಬ ನಾಮಫಲಕವನ್ನು ಅಳವಡಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಇದನ್ನು ಐತಿಹಾಸಿಕ ಕ್ರಮ ಎಂದು ಕರೆದಿದ್ದು, ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರಲು ಅಮೃತ ಕಾಲದಲ್ಲಿ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಗಿರಿರಾಜ್ ಸಿಂಗ್ ಬಣ್ಣಿಸಿದ್ದಾರೆ.

ರಾಷ್ಟ್ರಪತಿ ಮುರ್ಮು ಅವರಿಂದ ಉದ್ಯಾನ ಉದ್ಘಾಟನೆ :ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊಘಲ್ ಉದ್ಯಾನವನ್ನು ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಉದ್ಯಾನವನವನ್ನು ಜನವರಿ 29 ರಂದು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಸಂಸದೆ ಪೂನಂ ಮಹಾಜನ್ ಹೇಳಿದ್ದಾರೆ. ಇನ್ನು ಈ ಉದ್ಯಾನವು ಜನವರಿ 31ರಿಂದ ಮಾರ್ಚ್ 26 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಸಂಸದೆ ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಮಹಾರಾಷ್ಟ್ರ ರಾಜ್ಯಪಾಲ ಸ್ಥಾನ ಅಲಂಕರಿಸುತ್ತಾರಾ ಕ್ಯಾಪ್ಟನ್ ಅಮರಿಂದರ್ ಸಿಂಗ್!

ABOUT THE AUTHOR

...view details