ಕರ್ನಾಟಕ

karnataka

ETV Bharat / bharat

ವಿಶ್ವವಿಖ್ಯಾತ ಖಜರಾನ ಗಣೇಶ ದೇಗುಲದ ಹುಂಡಿಯಲ್ಲಿ ಸಿಕ್ತು 1 ಕೋಟಿ 80 ಲಕ್ಷ ರೂ

ಖಜರಾನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಂದೂವರೆ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

khajarana ganesh
ಖಜರಾನ ಗಣೇಶ

By

Published : Oct 26, 2021, 12:59 PM IST

Updated : Oct 26, 2021, 2:18 PM IST

ಇಂದೋರ್(ಮಧ್ಯಪ್ರದೇಶ): ಸತತ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಖಜರಾನ ಗಣೇಶ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. 32 ಹುಂಡಿಗಳಿಂದ 1 ಕೋಟಿ 80 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಖಜರಾನ ಗಣೇಶ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ್ ದುಬೆ ಮಾಹಿತಿ ನೀಡಿದ್ದಾರೆ.

ಖಜರಾನ ಗಣೇಶ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ

ವಿಶೇಷವೆಂದರೆ, ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಹಳೆಯ 500, 1000 ರೂ ನೋಟುಗಳನ್ನು ಅರ್ಪಿಸಿದ್ದಾರೆ ಎಂಬುದು ಗಮನಾರ್ಹ. ಸಂಗ್ರಹವಾಗಿರುವ ಹಣವನ್ನು ಬ್ಯಾಂಕ್​ಗೆ ಜಮಾ ಮಾಡಲಾಗುವುದು ಎಂದು ದುಬೆ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಹಾಗೂ ದೇವಸ್ಥಾನದ 25 ಕ್ಕೂ ಹೆಚ್ಚು ಸಿಬ್ಬಂದಿ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಈ ಬಾರಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳಲ್ಲಿ ಹಣದ ಜತೆಗೆ ಬೆಳ್ಳಿ, ಚಿನ್ನದ ನಾಣ್ಯಗಳು, ವಿದೇಶಿ ಕರೆನ್ಸಿ ಇದ್ದವು ಎಂದು ಪ್ರಕಾಶ್ ದುಬೆ ಹೇಳಿದ್ದಾರೆ.

ಇದನ್ನೂ ಓದಿ : ಅಯೋಧ್ಯೆಗೆ ಭೇಟಿ ನೀಡಿದ ಅರವಿಂದ್ ಕೇಜ್ರಿವಾಲ್: ರಾಮ್​ಲಲ್ಲಾದಲ್ಲಿ ಪೂಜೆ, ಪ್ರಾರ್ಥನೆ

Last Updated : Oct 26, 2021, 2:18 PM IST

ABOUT THE AUTHOR

...view details