ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ತಾಳಿ ಕಟ್ಟಿದ ಪತ್ನಿಯನ್ನು ರಕ್ಷಿಸಬೇಕಾದ ಗಂಡನೇ ಇಲ್ಲಿ ಆಕೆಯ ಬಾಳಿಗೆ ವಿಲನ್ ಆಗಿ ಹೇಯ ಕೃತ್ಯವೆಸಗಿದ್ದಾನೆ. 32 ವರ್ಷದ ಈ ಗೃಹಿಣಿ ಮೇಲೆ ಆಕೆಯ ಪತಿ ಮತ್ತು ಆತನ ನಾಲ್ವರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿದ್ದಾರೆ. ಈ ಆರೋಪದ ಮೇಲೆ ಐವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ತನ್ನ ಪತಿ ತನ್ನನ್ನು ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಷ್ಟೇ ಅಲ್ಲಾ, ಅವನು ತನ್ನ ಸ್ನೇಹಿತ ಮತ್ತು ಸೇವಕನಿಗೆ ನನ್ನನ್ನು ಒಪ್ಪಿಸಿದ್ದ, ಅವರೆಲ್ಲರೂ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ ಎಂದು ಮಹಿಳೆ ತನ್ನ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಇದನ್ನೂ ಓದಿ:1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಕರಾಚಿಯಲ್ಲಿ ಹೃದಯಾಘಾತದಿಂದ ಸಾವು
ಮಹಿಳೆ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾಗ್ತಿದೆ. ಹಾಗೆಯೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಹಿನ್ನೆಲೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಂತೆ.
ಹೆಚ್ಚಿನ ವಿವರ:
ನವೆಂಬರ್ 2019 ಮತ್ತು ಅಕ್ಟೋಬರ್ 2021 ರ ನಡುವೆ ಇಂದೋರ್‌ನ ಶಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಛತ್ತೀಸ್‌ಗಢ ಮೂಲದ ಈ ಮಹಿಳೆ ಇಂದೋರ್ ಮೂಲದ ವ್ಯಕ್ತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ನಂತರ ಇಬ್ಬರು ವಿವಾಹವಾಗಿದ್ದರು. ಆದರೆ, ಪೊಲೀಸ್ ತನಿಖೆಯಿಂದ ವ್ಯಕ್ತಿಗೆ ಈಗಾಗಲೇ ಬೇರೆಯವಳೊಂದಿಗೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂತ್ರಸ್ತೆ ಹೇಗೋ ಫಾರ್ಮ್‌ಹೌಸ್‌ನಿಂದ ತಪ್ಪಿಸಿಕೊಂಡು ಛತ್ತೀಸ್‌ಗಢದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಳಂತೆ. ಅಲ್ಲಿಗೂ ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಹಿಂಬಾಲಿಸಿಕೊಂಡು ಬಂದಿದ್ದನಂತೆ.