ಕರ್ನಾಟಕ

karnataka

ETV Bharat / bharat

Video: ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಗೆ ಜೀವ ಬರಿಸಲು ಮರಕ್ಕೆ ಮೃತದೇಹ ನೇತು ಹಾಕಿದ ಗ್ರಾಮಸ್ಥರು - ಮಧ್ಯಪ್ರದೇಶ ಸುದ್ದಿ

ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿ ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ತಲೆ ಕೆಳಗೆ ಮಾಡಿ ಮರಕ್ಕೆ ನೇತು ಹಾಕಿ, ಜೀವ ಬರುತ್ತದೆ ಎಂದು ಗ್ರಾಮಸ್ಥರು ಅರ್ಧ ಗಂಟೆ ಕಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

MP
ಜೀವ ಬರಿಸಲು ಮೃತದೇಹವನ್ನು ಮರಕ್ಕೆ ನೇತು ಹಾಕಿದ ಗ್ರಾಮಸ್ಥರು

By

Published : Aug 24, 2021, 7:59 PM IST

ಗುನಾ (ಮಧ್ಯಪ್ರದೇಶ): ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಗೆ ಜೀವ ಬರಿಸಲೆಂದು ಗ್ರಾಮಸ್ಥರು ಆತನ ಮೃತದೇಹವನ್ನು ತಲೆ ಕೆಳಗೆ ಮಾಡಿ ಮರಕ್ಕೆ ನೇತು ಹಾಕಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಜೋಗಿಪುರ ಗ್ರಾಮದಲ್ಲಿ ನಡೆದಿದೆ.

ಜೀವ ಬರಿಸಲು ಮೃತದೇಹವನ್ನು ಮರಕ್ಕೆ ನೇತು ಹಾಕಿದ ಗ್ರಾಮಸ್ಥರು

ನಿನ್ನೆ ಜೋಗಿಪುರ ಗ್ರಾಮದ ಭನ್ವರ್ ಲಾಲ್ ಎಂಬ ವ್ಯಕ್ತಿ ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿ ನೀರುಪಾಲಾಗಿದ್ದರು. ನೀರಿನಲ್ಲಿ ಮುಳುಗಿದವರನ್ನು ಮರಕ್ಕೆ ತಲೆ ಕೆಳಗೆ ಮಾಡಿ ನೇತು ಹಾಕಿದರೆ ಶ್ವಾಸಕೋಶಕ್ಕೆ ಪ್ರವೇಶಿಸಿದ ನೀರು ಹೊರಬಂದು ಅವರು ಉಸಿರಾಡುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಹೀಗಾಗಿ ಜೀವ ಹೋಗಿದ್ದರೂ ಭನ್ವರ್ ಲಾಲ್​ನನ್ನು 30 ನಿಮಿಷಗಳ ಮರಕ್ಕೆ ನೇತು ಹಾಕಿ, ದೇಹವನ್ನು ಅಲುಗಾಡಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ, ಮನೆಯಿಂದ ಓಡಿ ಹೋಗ್ತಿದ್ದ ಅಪ್ರಾಪ್ತ ಜೋಡಿಗೆ ಬಲವಂತದ ಮದುವೆ

ಅರ್ಧ ಗಂಟೆ ಕಾದರೂ ಆತನಿಗೆ ಜೀವ ಬರದ ಹಿನ್ನೆಲೆ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಮತ್ತೊಂದು ವಿಚಾರವೆಂದರೆ ಕುಂಭರಾಜ್ ಠಾಣಾ ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ.

ABOUT THE AUTHOR

...view details