ಶಿವಪುರಿ(ಮಧ್ಯಪ್ರದೇಶ):ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ಕೆಲವೊಂದು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಇನ್ನಿಲ್ಲದ ತೊಂದರೆ ಎದುರಾಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಪ್ರಾಣಿ - ಪಕ್ಷಿಗಳು ತೊಂದರೆಗೊಳಗಾಗಿ ನರಕಯಾತನೆ ಅನುಭವಿಸುವಂತಾಗಿದೆ. ಕೆಲವೊಂದು ಜಲಚರ ಪ್ರಾಣಿಗಳು ಪ್ರವಾಹದಿಂದಾಗಿ ಊರಿನೊಳಗೆ ಲಗ್ಗೆ ಹಾಕುತ್ತಿವೆ.
ಮಧ್ಯಪ್ರದೇಶದ ಶಿವಪುರಿಯಲ್ಲಿ ಪ್ರವಾಹದಿಂದಾಗಿ ಬೃಹತ್ ಮೊಸಳೆವೊಂದು ಊರಿಗೆ ಲಗ್ಗೆ ಹಾಕಿದೆ. ಇದನ್ನ ನೋಡಿರುವ ಕೆಲ ಯುವಕರು, ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಇದಾದ ಬಳಿಕ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಚಂದ್ರಪತ್ ಕೆರೆಗೆ ಬಿಟ್ಟು ಬಂದಿದ್ದಾರೆ.